ಮನೆ ಅಪರಾಧ ದೆಹಲಿ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ

ದೆಹಲಿ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ

0

ಹೊಸದಿಲ್ಲಿ: ದೆಹಲಿಯ ಘಾಝಿಪುರದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಮಾಧ್ಯಮಗಳು ವರದಿಯಾಗಿದೆ.

ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಚೀಲವೊಂದರಲ್ಲಿ ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಅಗ್ನಿಶಾಮಕ ದಳಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ದಿಲ್ಲಿ ಪೊಲೀಸ್ ವಿಶೇಷ ದಳವೂ ಸ್ಥಳಕ್ಕೆ ತಲುಪಿದೆ. ಘಾಝಿಪುರ ಮಂಡಿಯಲ್ಲಿ ಪತ್ತೆಯಾದ ಬಾಂಬ್ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಎಂದು ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ  ಮಾಹಿತಿ ಖಚಿತಪಡಿಸಿದ್ದಾರೆ.

ಹಿಂದಿನ ಲೇಖನಜನವರಿ 31ರಿಂದ ಏಪ್ರಿಲ್ 8ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ
ಮುಂದಿನ ಲೇಖನಸ್ವಾಮಿ ವಿವೇಕಾನಂದರ ಬದುಕಿನ ಪಥ ಯುವಜನರಿಗೆ ಬೆಳಕು: ಪದ್ಮಾವತಿ