ಮನೆ ಮನರಂಜನೆ ‘ರಾಘವೇಂದ್ರ’ಚಿತ್ರದ ಟೀಸರ್ ಬಿಡುಗಡೆ

‘ರಾಘವೇಂದ್ರ’ಚಿತ್ರದ ಟೀಸರ್ ಬಿಡುಗಡೆ

0

ವಿಕ್ರಮ್ ಯಶೋಧರ್‌ ಎನ್‌. ಆ್ಯಕ್ಷನ್‌ ಕಟ್‌ ಹೇಳಿರುವ ‘ರಾಘವೇಂದ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಟೀಸರ್‌ ಅನ್ನು ಇತ್ತೀಚೆಗೆ ನಟ ಧೀರನ್‌ ರಾಮ್‌ಕುಮಾರ್‌ ಬಿಡುಗಡೆ ಮಾಡಿದರು.

ನಟ ಸುಪ್ರೀತ್ ಮುಖ್ಯ ಭೂಮಿಕೆಯಲ್ಲಿದ್ದು,  ಜೋಡಿಯಾಗಿ ಈ ಚಿತ್ರದಲ್ಲಿ ಪ್ರತೀಕ್ಷಾ ನಟಿಸಿದ್ದಾರೆ. ನಿರ್ದೇಶಕ ವಿಕ್ರಮ್ ಮಾತನಾಡಿ, ‘ಇದು ನನ್ನ ಹಾಗೂ ಸುಪ್ರೀತ್‌ ಅವರ ಕಾಂಬಿನೇಷನ್‌’ನ ಎರಡನೇ ಸಿನಿಮಾ.

ಇದೊಂದು ವಿಷಯಾಧಾರಿತ ಚಿತ್ರ. ಒಬ್ಬ ಬಾರ್ ಸಪ್ಲೈಯರ್ ಹಾಗೂ ಅನಕ್ಷರಸ್ಥ ಹುಡುಗಿ ಇಬ್ಬರೂ ಸೇರಿ ಹಳ್ಳಿಯ ಅಭಿವೃದ್ಧಿಗೆ ಪಣತೊಡುತ್ತಾರೆ. ಊರಿಗೆ ಬೇಕಾದ ಮೂಲಸೌಕರ್ಯಗಳನ್ನು ಹಳ್ಳಿಯ ಜನರ ಜೊತೆಗೂಡಿ ಅನುಷ್ಠಾನ ಮಾಡುತ್ತಾರೆ. ಅರಕೆರೆ, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಫೆಬ್ರುವರಿ ಮೊದಲ ವಾರ ಚಿತ್ರ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.

‘ನನಗೆ ಮೊದಲಿಂದಲೂ ಸಿನಿಮಾ ಹುಚ್ಚು. ಇದು ನನ್ನ ಎರಡನೇ ಚಿತ್ರ. ಹುಲಿದುರ್ಗ ನಂತರ ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾ ಕಮರ್ಷಿಯಲ್‌ ಅಂಶಗಳಿಂದ ಕೂಡಿದ್ದರೂ, ಒಂದೊಳ್ಳೆಯ ಸಂದೇಶ ಚಿತ್ರದಲ್ಲಿದೆ ಎನ್ನುತ್ತಾರೆ ಸುಪ್ರೀತ್‌.

ರಂಗಭೂಮಿಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿರುವ ಪ್ರತೀಕ್ಷಾ ಅವರಿಗೆ ಇದು ಚೊಚ್ಚಲ ಚಿತ್ರ. ಚಿತ್ರಕ್ಕೆ ಅಲೆಕ್ಸ್ ಸಂಗೀತ ನಿರ್ದೇಶನವಿದ್ದು, ಎನ್.ಉಮೇಶ್ ಕ್ಯಾಮೆರಾ ಹಿಡಿದಿದ್ದಾರೆ. ದೀಪಕ್ ಸಿ.ಎಸ್. ಸಂಕಲನ‌ ಚಿತ್ರಕ್ಕಿದೆ.

ಹಿಂದಿನ ಲೇಖನ28.78 ಕೋಟಿ ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣದ ಅಭಿವೃದ್ಧಿ: ಪ್ರತಾಪ್ ಸಿಂಹ
ಮುಂದಿನ ಲೇಖನನ್ಯಾಯಾಂಗಕ್ಕೆ ಯಾವುದೇ ಪ್ರಕರಣ ದೊಡ್ಡದೂ ಅಲ್ಲ ಚಿಕ್ಕದೂ ಅಲ್ಲ: ಕಾನೂನು ಸಚಿವರ ಹೇಳಿಕೆಗೆ ಸಿಜೆಐ ಪ್ರತಿಕ್ರಿಯೆ