ಮನೆ ಕಾನೂನು ಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯ ಬಂಧನ

ಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯ ಬಂಧನ

0

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  ಅವರ ಮನೆಗೆ ವ್ಯಕ್ತಿಯೊಬ್ಬ ಪ್ರವೇಶಿಸಲು ಯತ್ನಿಸಿದ ಬೆಂಗಳೂರು ಮೂಲದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕಾರಿನಲ್ಲಿ ಬಂದ ವ್ಯಕ್ತಿ ದೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.  ಅಜಿತ್ ದೋವಲ್  ಅವರ ನಿವಾಸದ ಒಳಗೆ ಪ್ರವೇಶಿಸಲು ಮುಂದಾದ ವೇಳೆ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಘಟನೆ ಬೆನ್ನಲ್ಲೇ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಪೊಲೀಸರು ಎಲ್ಲಾ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.
ಇನ್ನು ವಶಕ್ಕೆ ಪಡೆದ ವ್ಯಕ್ತಿ ಬೆಂಗಳೂರಿನ ಮೂಲದವರು ಎನ್ನಲಾಗಿದೆ. 43 ವರ್ಷದ ವ್ಯಕ್ತಿ ವಿಚಾರಣೆ ವೇಳೆ ತಮ್ಮ ದೇಹದೊಳಗೆ ಯಾರೋ ಚಿಪ್ ಅಳವಡಿಸಿದ್ದು, ಅವರು ನನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾನೆ. ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ವಿಚಾರಣೆ: ಇಂದು ಬೆಳಗ್ಗೆ 7.35ರ ಸುಮಾರಿಗೆ 43 ವರ್ಷದ ವ್ಯಕ್ತಿ ಮನೆಗೆ ನುಗ್ಗಲು ಯತ್ನಿಸಿದ ತಕ್ಷಣಕ್ಕೆ ಸ್ಥಳೀಯ ಪೊಲೀಸರು ಮತ್ತು ವಿಶೇಷ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿತು. ವ್ಯಕ್ತಿಯನ್ನು ಕರೆದುಕೊಂಡು ಲೋಧಿ ಕಾಲೋನಿಯಲ್ಲಿರುವ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ಗುಪ್ತಚರ ಸಂಸ್ಥೆಗಳ ತಂಡದ ಸದಸ್ಯರು ಆಗಮಿಸಿ ವಿಚಾರಣೆ ನಡೆಸಿದರು. ಆತನ ವಿವರ ಪತ್ತೆಗಾಗಿ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಲಾಗಿದೆ.

ಹಿಂದಿನ ಲೇಖನತಾಯಿಯ ಮಹತ್ವ ಸಾರಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಮುಂದಿನ ಲೇಖನಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ: ಪೂರ್ವಭಾವಿ ಸಭೆ