ಮನೆ ಸುದ್ದಿ ಜಾಲ ಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ: ಪೂರ್ವಭಾವಿ ಸಭೆ

ಮೇಲುಕೋಟೆ ಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ: ಪೂರ್ವಭಾವಿ ಸಭೆ

0

ಬೆಂಗಳೂರು:ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀ ಚಲುವ ನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಆಚರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿಂದು ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮಾರ್ಚ್ 9 ರಿಂದ 21 ರ ವರೆಗೆ ನಡೆಯಲಿರುವ ಶ್ರೀ ಚಲುವ ನಾರಾಯಣ ಸ್ವಾಮಿಯ ವೈರಮುಡಿ  ಬ್ರಹ್ಮೋತ್ಸವ ಆಚರಣೆ  ಪೂರ್ವ ಸಿದ್ಧತೆ ಮತ್ತು ಮುಂಜಾಗ್ರತ ಕ್ರಮಗಳ ಕುರಿತು ಅಧಿಕಾರಿಗಳೊಂದಿದೆ ಸಚಿವರು ಚರ್ಚೆ ನಡೆಸಿದರು.

ಸಭೆಯಲ್ಲಿ ಶಾಸಕ ಪುಟ್ಟರಾಜು, ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯ ಬಂಧನ
ಮುಂದಿನ ಲೇಖನಕುಶಾಲನಗರ ಕಸಾಪದಿಂದ ಸಾಹಿತಿ ಚೆನ್ನವೀರಕಣವಿಗೆ ಶ್ರದ್ದಾಂಜಲಿ