ಮನೆ ಸುದ್ದಿ ಜಾಲ ಇಂದು ಇತಿಹಾಸ, ಅದರ ಅರಿವು ಯಾರಿಗೂ ಬೇಡವಾಗಿದೆ: ಡಾ. ಶರತ್‌ ಚಂದ್ರ ಸ್ವಾಮೀಜಿ

ಇಂದು ಇತಿಹಾಸ, ಅದರ ಅರಿವು ಯಾರಿಗೂ ಬೇಡವಾಗಿದೆ: ಡಾ. ಶರತ್‌ ಚಂದ್ರ ಸ್ವಾಮೀಜಿ

0

ಮೈಸೂರು(Mysuru): ಇತಿಹಾಸವಾಗಲಿ ಅದು ನೀಡುವ ಅರಿವಾಗಲಿ ಇಂದು ಯಾರಿಗೂ ಬೇಡವಾಗಿದೆ. ಕೇವಲ‌ ವರ್ತಮಾನದ ಬದುಕು, ಭವಿಷ್ಯದ ಆಶಾವಾದವಷ್ಟೇ ಮುಖ್ಯವಾಗಿದೆ ಎಂದು ಕುಂದೂರು ಮಠದ ಡಾ. ಶರತ್‌ ಚಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ನಗರದ ಸರಸ್ವತಿಪುರಂನಲ್ಲಿರುವ ಡಾ.ಎಸ್.ರಾಧಾಕೃಷ್ಣನ್ ತತ್ವ ಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದಲ್ಲಿ ಶ್ರೀ ವ್ಯಾಸ – ವಾಲ್ಮೀಕಿ ಅಧ್ಯಯನ ಪೀಠದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇತಿಹಾಸ ಇಲ್ಲದಿದ್ದರೆ ಬದುಕು ಮುಂದೆ ಹೋಗಲು ಸಾಧ್ಯವಿಲ್ಲ. ಭಾರತೀಯ ನಾಗರಿಕತೆ ಪ್ರಾಚೀನವಾದದ್ದು, ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಾಕಷ್ಟು ಅಂಶಗಳಿವೆ. ಬ್ರಾಹ್ಮಿ ಲಿಪಿ ಕೊಟ್ಟಿದ್ದು, ವಿವಿ ಆಶಯವನ್ನು ಕೊಟ್ಟಿದ್ದು ಭಾರತ. ಆದರೆ, ಎಲ್ಲವನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ‌ ಎಂದು ವಿಷಾದಿಸಿದರು.

ಇಂದು ಎಲ್ಲ ರೀತಿಯ ತಂತ್ರಜ್ಞಾನ ಇದ್ದರೂ ಇತಿಹಾಸದ ಹಳೇಬೀಡನ್ನು ಮತ್ತೆ ನಿರ್ಮಾಣ ಮಾಡಲು ಆಗುವುದಿಲ್ಲ. ವ್ಯಾಸ ವಾಲ್ಮೀಕಿ ಒಬ್ಬರು ಅನರ್ಘ್ಯ ರತ್ನಗಳು. ರಾಮಾಯಣ ಮತ್ತು ಮಹಾಭಾರತ ಇತರ ದೇಶಗಳಿಗೂ ಪ್ರಭಾವ ಬೀರಿದೆ. ಆದರೆ, ಭಾರತದಲ್ಲಿ ಈ ಇಬ್ಬರನ್ನು ಜಾತಿಗೆ ಸೀಮಿತಗೊಳಿಸಲಾಗಿದೆ. ಜಾತಿ ಮೀರಿ ಈ ಇಬ್ಬರೂ ಮಹನೀಯರನ್ನು ನೋಡಬೇಕಿದೆ.‌ ಪೀಠದಿಂದ ಸಾಕಷ್ಟು ಸಂಶೋಧನೆ ಹಾಗೂ ಅಧ್ಯಯನ ಆಗಲಿ. ಕೃತಿಗಳ‌ ಸಾರ ಸಂದೇಶ ಪುಸ್ತಕ ರೂಪದಲ್ಲಿ ಬರಲಿ ಎಂದು ಆಶಿಸಿದರು.

ಹಿಂದಿನ ಲೇಖನಡಿಮ್ಹಾನ್ಸ್‌ನಲ್ಲಿ ಎಂಆರ್‌ಐ ಯಂತ್ರ ಅಳವಡಿಕೆ, ಮೇಲ್ವಿಚಾರಕಿ ನೇಮಕ
ಮುಂದಿನ ಲೇಖನಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚಲು ಹೈಕೋರ್ಟ್‌ ಆದೇಶ