ಮನೆ ಅಂತರಾಷ್ಟ್ರೀಯ ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌..?

ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌ – ಭಾರತಕ್ಕೇನು ಎಫೆಕ್ಟ್‌..?

0

ವಾಷಿಂಗ್ಟನ್‌ : 2ನೇ ಬಾರಿಗೆ ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸುಂಕ ಸುಂಕ ಅಂತಲೇ ಕನವರಿಸುತ್ತಿರುವ ಡೊನಾಲ್ಡ್‌ ಟ್ರಂಪ್‌ ಈಗ ಮತ್ತೊಂದು ವರಸೆ ತೆಗೆದಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಔಷಧಗಳ ಆಮದಿನ ಮೇಲೆ ಶೇ.100ರಷ್ಟು ಸುಂಕ ಘೋಷಿಸಿದ್ದಾರೆ. ಇದು ಅಕ್ಟೋಬರ್ 1ರಿಂದ ಜಾರಿಯಾಗಲಿದೆ.

ಅಲ್ಲದೇ ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್‌) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಜೊತೆಗೆ ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಅಕ್ಟೋಬರ್‌ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ.100ರಷ್ಟು ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ್ರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯ್ತಿ ಸಿಗಲಿದೆ ಎಂದು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಔಷಧಗಳ ಆಮದಿನ ಮೇಲೆ 100%, ಅಡುಗೆಮನೆ ಪಿಠೋಪಕರಣಗಳ ಮೇಲೆ 50%, ಸ್ನಾನಗೃಹ ಪಿಠೋಪಕರಣಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್‌) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದೆ, ಇದು ತುಂಬಾ ಅನ್ಯಾಯ. ಅಲ್ಲದೇ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಪೀಟರ್‌ಬಿಲ್ಟ್, ಕೆನ್‌ವರ್ತ್, ಫ್ರೈಟ್‌ಲೈನರ್, ಮ್ಯಾಕ್ ಸೇರಿದಂತೆ ನಮ್ಮ ಇತರ ಟ್ರಕ್‌ ತಯಾರಕರನ್ನು ರಕ್ಷಿಸಲು ಹಾಗೂ ಅವರನ್ನು ಆರ್ಥಿಕ ಬಲಶಾಲಿಗಳನ್ನಾಗಿಸಲು ಹೆವಿ ಟ್ರಕ್‌ ಮೇಲೆ 25% ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ.