ಮನೆ ಯೋಗಾಸನ ಉತ್ಥಿತ ಪದ್ಮಾಸನ

ಉತ್ಥಿತ ಪದ್ಮಾಸನ

0

ಉತ್ಥಿತ ಪದ್ಮಾಸನಕ್ಕೆ ಹಲವು ಹೆಸರುಗಳಿವೆ. ಇದನ್ನು ತೋಲಾಸನವೆಂದೂ, ಲೋಲಾಸನವೆಂದೂ ಕರೆಯುತ್ತಾರೆ. ಪದ್ಮಾಸನ ಸಹಿತ ನೆಲದಿಂದ ಮೇಲಕ್ಕೆ ಇಡೀ ಶರೀರವನ್ನು ಎತ್ತುವುದಕ್ಕೆ ಉತ್ಥಿತ ಪದ್ಮಾಸನವೆಂದೂ, ಎರಡೂ ಕೈಗಳು ಇಡೀ ಶರೀರದ ಭಾರವನ್ನು ಹೊರುವುದರಿಂದ ತೋಲಾಸನವೆಂದೂ, ತೋಲಾಸನದಲಲ್ಲೇ  ಉಯ್ಯಾಲೆಯಂತೆ –ಹಿಂದಕ್ಕೂ – ಮಂದಕ್ಕೂ – ತೂಗಾಡುವುದಕ್ಕೆ ಲೋಲಾಸನವೆಂದೂ ಕರೆಯಲಾಗುತ್ತದೆ. ಈ ಆಸನವು ಪದ್ಮಾಸನದ ಒಂದು ವ್ಯತ್ಯಸ್ತ ಭಂಗಿ.

Join Our Whatsapp Group

ಮಾಡುವ ಕ್ರಮ

ಉತ್ಥಿತ ಪದ್ಮಾಸನಕ್ಕೆ ಮೊದಲು ಯೋಗಾಭ್ಯಾಸಿಯು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ತೊಡೆಗಳ ಹಿಂದೆ ಅಂಗೈಗಳನ್ನು ನೆಲದಲ್ಲಿ ಭದ್ರವಾಗಿ ಊರಬೇಕು. ಅನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪದ್ಮಾಸನದ ಸ್ಥಿತಿಯಲ್ಲೇ ಚಿತ್ರದಲ್ಲಿ ತೋರಿಸಿರುವಂತೆ ಶರೀರವನ್ನು ಮೇಲಕ್ಕೆತ್ತಬೇಕು. ಯಾವುದೇ ಸಂದರ್ಭದಲ್ಲೂ ಕೈಗಳನ್ನು ಬಗ್ಗಿಸಬಾರದು.  ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಶರೀರದ ಭಾರದಿಂದ ಕೊಂಚ ಕೈಗಳು ಬಗ್ಗುವುದು ಸಹಜ. ಈ ಸ್ಥಿತಿಯಲ್ಲಿ ಮೊದಲು ಸಮತೋಲನ ಪಡೆಯನಂತರ ಉಯ್ಯಾಲೆಯಂತೆ ಶರೀರವನ್ನು ನಿಧಾನವಾಗಿ ಹಿಂದಕ್ಕೂ ಮುಂದಕ್ಕೂ ತೂಗಾಡಿಸಬಹುದು. ಆಯ ತಪ್ಪಿ ಮುಗ್ಗರಿಸುವ ಸಂಭವ ಇದೆ. 1ರಿಂದ 3ನಿಮಿಷಗಳ ವರೆಗೆ ಈ ಸ್ಥಿತಿಯಲ್ಲಿ ಇದ್ದು ಕಾಲುಗಳನ್ನು ಬದಲಿಸಬಹುದು. ಈ ಆಸನವನ್ನು ಮೂರು ನಾಲ್ಕು ಬಾರಿ ಮಾಡುವುದು ಉತ್ತಮ.

ಲಾಭಗಳು

ಕುಕ್ಕುಟಾಸನ ಮತ್ತು ಪದ್ಮಾಸನದ ಎಲ್ಲ ಲಾಭಗಳನ್ನು ಈ ಆಸನದ ಅಭ್ಯಾಸದಿಂದಲೂ ಪಡೆಯಬಹುದು. ವಿಶೇಷವಾಗಿ ತೋಳು, ಎದೆ, ಅಂಗೈಗಳ ಸ್ನಾಯುಗಳು ಹೆಚ್ಚು ಬಲಶಾಲಿಯಾಗುವುದಲ್ಲದೆ ಜೀರ್ಣಶಕ್ತಿಯೂ ಹೆಚ್ಚುವುದು.

ಹಿಂದಿನ ಲೇಖನಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ ||
ಮುಂದಿನ ಲೇಖನಹಾಸ್ಯ