ಮನೆ ಸುದ್ದಿ ಜಾಲ ಟಿ20 ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ  ಸೃಷ್ಟಿಸಿದ ವೈಭವ್ ಸೂರ್ಯವಂಶಿ

ಟಿ20 ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ  ಸೃಷ್ಟಿಸಿದ ವೈಭವ್ ಸೂರ್ಯವಂಶಿ

0

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಘಟಾನುಘಟಿ ಬೌಲರ್‌ಗಳಿಗೆ ಬೌಂಡರಿ ಸಿಕ್ಸರ್ ಸಿಡಿಸಿ ದಾಖಲೆ ಬರೆಯುತ್ತಿದ್ದಾರೆ. ಅತೀ ವೇಗದ ಶತಕ, ಹಾಫ್ ಸೆಂಚುರಿ ಸೇರಿದಂತೆ ಈಗಾಗಲೇ ರೆಕಾರ್ಡ್ ಬರೆದಿರುವ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ದಿಗ್ಗಜ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಈ 15ರ ಪೋರ ಹೊಸ ದಾಖಲೆ ಬರೆದಿದ್ದು ಐಪಿಎಲ್ ಟೂರ್ನಿಯಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸುತ್ತಿರುವ ವೈಭವ್ ಸೂರ್ಯವಂಶಿ ಇದೀಗ 20 ವಯಸ್ಸು ದಾಟುವ ಮೊದಲೇ ಟಿ20ಯಲ್ಲಿ ಅತೀ ವೇಗದಲ್ಲಿ 100 ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. 20 ವರ್ಷದೊಳಗೆ ಅತೀ ಕಡಿಮೆ ಎಸೆತದಲ್ಲಿ 100 ಟಿ20 ಸಿಕ್ಸರ್ ದಾಖಲೆ ಇದೀಗ ವೈಭವ್ ಸೂರ್ಯವಂಶಿ ಹೆಸರಿನಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.

ಆದರೆ ವಿಶೇಷ ಅಂದರೆ ಟಿ20ಯಲ್ಲಿ ಅತೀ ಕಡಿಮೆ ಎಸೆತದಲ್ಲಿ ಅತೀ ವೇಗದಲ್ಲಿ 100 ಸಿಕ್ಸರ್ ಪೂರೈಸಿದ ಕ್ರಿಕೆಟಿ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ದಾಖಲೆ ಮುರಿದಿದ್ದಾರೆ. ವೈಭವ್ 514 ಎಸೆತದಲ್ಲ 100 ಸಿಕ್ಸರ್ ದಾಖಲೆ ಬರೆದಿದ್ದರೆ, ಇದಕ್ಕೂ ಮೊದಲು ಕೀರನ್ ಪೋಲಾರ್ಡ್ 843 ಎಸೆತದಲ್ಲಿ ಈ ಸಾಧನೆ ಮಾಡಿದ್ದರು. ಸುದೀರ್ಘ ವರ್ಷಗಳ ಕಾಲ ಇದ್ದ ಪೊಲಾರ್ಡ್ ದಾಖಲೆಯನ್ನು ವೈಭವ್ ಮುರಿದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ದ ಕೇವಲ 16 ಎಸೆತದಲ್ಲಿ 36 ರನ್ ಸಿಡಿಸಿ ಈ ದಾಖಲೆ ಬರೆದಿದ್ದರು. ವೈಭವ್ ಈ ಪಂದ್ಯದಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿದ್ದರು. ಮೊಹಮ್ಮದ್ ಸಿರಾಜ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಇದೀಗ ವೈಭವ್ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರಿಂದ ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ 12 ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಗರಿಷ್ಠ ಸಿಕ್ಸರ್ ದಾಖಲೆ ಬರೆದಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ವೈಭವ್ ಈ ದಾಖಲೆ ಬರೆದಿದ್ದರು. ಇದೇ ಪಂದ್ಯದಲ್ಲಿ ವೈಬವ್ 37 ಎಸೆತದಲ್ಲಿ 103 ರನ್ ಸಿಡಿಸಿದ್ದರು ಎನ್ನಲಾಗಿದೆ.