ಮನೆ ಸುದ್ದಿ ಜಾಲ ಮಂಗನಿಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು : ಚಿಕ್ಕೋಡಿ

ಮಂಗನಿಗೆ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು : ಚಿಕ್ಕೋಡಿ

0

ಚಿಕ್ಕೋಡಿ (ಬೆಳಗಾವಿ) ಆಕಸ್ಮಿಕವಾಗಿ ಸಾವೀಗಿಡಾದ  ಮಂಗವೊಂದಕ್ಕೆ ಶಿರಹಟ್ಟಿ ಗ್ರಾಮಸ್ಥರು ಲಿಂಗಾಯತ ಧರ್ಮದ ಸಂಪ್ರದಾಯದಂತೆ, ಮನುಷ್ಯನಿಗೆ ಮಾಡುವ ರೀತಿಯಲ್ಲೇ ಅಂತ್ಯಕ್ರಿಯೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತ್ತಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮಂಗವೊಂದು ಮರದಿಂದ ಮರಕ್ಕೆ ಹಾರುವ ಸಮಯದಲ್ಲಿ ಆಯ ತಪ್ಪಿ  ಕೆಳಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಇದರ  ಹಿನ್ನೆಲೆ, ಶಿರಹಟ್ಟಿ ಆರ್​​ಸಿ ಸೆಂಟರ್​​ನಲ್ಲಿ ಹಿಂದೂ ಧರ್ಮದ ವಿಧಿ- ವಿಧಾನದಂತೆ ಗ್ರಾಮಸ್ಥರು ಮಂಗನ ಅಂತ್ಯಕ್ರಿಯೆ ನಡೆಸಿದ್ದು. ಮೃತಪಟ್ಟ ಕಪಿಯ ಶವವನ್ನು ಕಬ್ಬು, ಬಾಳೆ ಕಂಬ ಹಾಗೂ ಮಾವಿನ ತೋರಣಗಳಿಂದ ವಿಶೇಷವಾಗಿ ಶೃಂಗಾರ ಮಾಡಲಾಗಿತ್ತು. ಬಳಿಕ, ಶಿರಹಟ್ಟಿ ಗ್ರಾಮದಿಂದ ಶಿರಹಟ್ಟಿ ಆರ್. ಸಿವರೆಗೆ ಅದರ ಶವದ ಅದ್ಧೂರಿ ಮೆರವಣಿಗೆ ಮಾಡಲಾಯಿತು ಎನ್ನಲಾಗಿದೆ.

ಇದರ  ಅಂತಿಮ ಯಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಒಟ್ಟಾಗಿ ಸೇರಿಕೊಂಡು, ಲಿಂಗಾಯತ ಧರ್ಮದ ಸಂಪ್ರದಾಯದಂತೆ ಅತ್ಯಂತ ಭಕ್ತಿ – ಭಾವದಿಂದ ಶವಸಂಸ್ಕಾರ ನೆರವೇರಿಸಿದ್ದು ಪ್ರಾಣಿ ಪೀತಿಯನ್ನು ಮೇರೆದಿದ್ದಾರೆ ಎನ್ನಬಹುದು. ಹೀಗೆ ಶವಸಂಸ್ಕಾರದ ವಿಧಿ – ವಿಧಾನಗಳು ಪೂರ್ಣಗೊಂಡ ನಂತರ ಕಪಿಗೆ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗನನ್ನು ಆಂಜನೇಯನ ಸ್ವರೂಪ ಎಂದು ಭಾವಿಸಿದ ಗ್ರಾಮಸ್ಥರು, ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಭವ್ಯವಾದ ಹನುಮಂತನ ದೇವಸ್ಥಾನವನ್ನು ನಿರ್ಮಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯ ನಿವಾಸಿಯರಾದ ಮಹೇಶ್ ಅಥಣಿ ಅವರು ಮಾತನಾಡಿದ್ದು, ‘ಇವತ್ತು ಶನಿವಾರ ಮಂಗ ಮೃತಪಟ್ಟ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಒಟ್ಟಾಗಿ ಮಂಗನ ಶವ ಸಂಸ್ಕಾರ ನಿರ್ವಹಿಸಿದ್ದೇವೆ. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಮಂಗ ಹಾಗೂ ದೇಸಿ ಹಸು, ಎತ್ತು, ಹೋರಿ ತೀರಿದರೂ ಹಿಂದೂ ಧರ್ಮದ ಆಚರಣೆಯಂತೆ ಅವುಗಳಿಗೆ ಶವ ಸಂಸ್ಕಾರ ಮಾಡುತ್ತೇವೆ. ಇವತ್ತು ಮಂಗ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಮಂಗನ ಅಂತ್ಯಕ್ರಿಯೆ ನಿರ್ವಹಿಸಿದ್ದೇವೆ. ಇದರ ಮೇಲೆ ಹನುಮಾನ್ ದೇವಸ್ಥಾನ ನಿರ್ಮಾಣ ಮಾಡುತ್ತೇವೆ. ಇವತ್ತು ಸಾಂಕೇತಿಕವಾಗಿ ಒಂದು ಕಲ್ಲು ಇಟ್ಟು ಪೂಜೆ ಮಾಡಲಾಗಿದೆ. ಮುಂದೆ ಸ್ಥಳೀಯರು ಸೇರಿಕೊಂಡು ದೊಡ್ಡದಾಗಿ ಒಂದು ದೇವಸ್ಥಾನ ನಿರ್ಮಾಣ ಮಾಡುತ್ತೇವೆ’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ.