ಮನೆ ಕಾನೂನು ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಪಾವತಿಸುವ ಉದ್ಯೋಗದಾತ ಸಂಸ್ಥೆಯ ಹೊಣೆಗಾರಿಕೆ ಶುರು: ಸುಪ್ರೀಂ ಕೋರ್ಟ್ 

ಕಾರ್ಮಿಕರ ಮರಣದ ದಿನದಿಂದಲೇ ಪರಿಹಾರ ಪಾವತಿಸುವ ಉದ್ಯೋಗದಾತ ಸಂಸ್ಥೆಯ ಹೊಣೆಗಾರಿಕೆ ಶುರು: ಸುಪ್ರೀಂ ಕೋರ್ಟ್ 

0

ಹೊಸದಿಲ್ಲಿಕೆಲಸಗಾರ ಸಾವನ್ನಪ್ಪಿದ ಕ್ಷಣದಿಂದಲೇ ಪರಿಹಾರ ನೀಡುವ ಉದ್ಯೋಗದಾತರ ಹೊಣೆಗಾರಿಕೆ ಶುರುವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಅಲ್ಲದೆ, ಬಡ್ಡಿಯನ್ನು ಸಹ ಮರಣದ ದಿನಾಂಕದಿಂದಲೇ ವಿಧಿಸಲಾಗುತ್ತದೆ, ಆಯುಕ್ತರು, ಅಂಗೀಕರಿಸಿದ ಆದೇಶದ ದಿನಾಂಕದಿಂದ ಅಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ.

2009ರಲ್ಲಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಹೊಲದಲ್ಲಿ ಕಬ್ಬು ಕಡಿಯುತ್ತಿದ್ದಾಗ ಹಾವು ಕಡಿತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಕಂಟ್ರ್ಯಾಕ್ಟರ್ ಆಗಲಿ ಫ್ಯಾಕ್ಟರಿಯವರಾಗಲಿ ಪರಿಹಾರ ನೀಡಲಿಲ್ಲ. ಮೃತರ ಕುಟುಂಬ ಅಯುಕ್ತರ ಮೊರೆ ಹೊಕ್ಕಿತ್ತು. ನಂತರ 
ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಯುಕ್ತರು ಆದೇಶಿಸಿದ್ದರು. 

ಆಯುಕ್ತರ ಆದೇಶದ ದಿನದಿಂದ 12 % ಬಡ್ಡಿಯನ್ನು ವಿಧಿಸಲಾಗಿತ್ತು. ಅದರ ವಿರುದ್ಧ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದೀಗ ವ್ಯಕ್ತಿ ಮರಣ ಹೊಂದಿದ ದಿನಾಂಕದಿಂದಲೇ 12% ಬಡ್ಡಿ ಪರಿಗಣಿಸಲ್ಪಡುತ್ತದೆ, ಆಯುಕ್ತರು ಆದೇಶ ನೀಡಿದ ದಿನಾಂಕದಿಂದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 

ಹಿಂದಿನ ಲೇಖನಯುಪಿಎಸ್ ಸಿ ಮಾದರಿ ಕೆಪಿಎಸ್ ಸಿ ವ್ಯಕ್ತಿತ್ವ ಪರಿಕ್ಷೆ ನಡೆಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಮುಂದಿನ ಲೇಖನಅವಧಿಗೂ ಮುನ್ನ ಚುನಾವಣೆ ಬಂದರೆ ಎದುರಿಸಲು ಸಿದ್ಧ:  ಸಿದ್ದರಾಮಯ್ಯ.