ಮನೆ ಮನರಂಜನೆ ದಲಿತ ಮಹಿಳಾ ಪತ್ರಕರ್ತೆ ಕುರಿತ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ ಆಸ್ಕರ್‍ ಗೆ ನಾಮ ನಿರ್ದೇಶನ

ದಲಿತ ಮಹಿಳಾ ಪತ್ರಕರ್ತೆ ಕುರಿತ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ ಆಸ್ಕರ್‍ ಗೆ ನಾಮ ನಿರ್ದೇಶನ

0

ನವದೆಹಲಿ: ಲಿತ ಮಹಿಳಾ ಪತ್ರಕರ್ತೆ ಕುರಿತ ಸಾಕ್ಷ್ಯಚಿತ್ರ, ‘ರೈಟಿಂಗ್ ವಿತ್ ಫೈರ್’, ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ.

ಮಂಗಳವಾರ ನಡೆದ 94ನೇ ಆಸ್ಕರ್ ನಾಮನಿರ್ದೇಶನಗಳ ಪ್ರದರ್ಶನದ ಸಂದರ್ಭದಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಭಾರತೀಯ ಸಾಕ್ಷ್ಯಚಿತ್ರ “ರೈಟಿಂಗ್ ವಿತ್ ಫೈರ್” ಅನ್ನು ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮನಿರ್ದೇಶನ ಮಾಡಿದೆ.

ದೆಹಲಿ ಮೂಲದ ಚಲನಚಿತ್ರ ನಿರ್ಮಾಪಕರಾದ ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ಅವರ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ (Writing With Fire) ಈ ವರ್ಷದ ಆಸ್ಕರ್ ನಾಮನಿರ್ದೇಶಿತ ಪಟ್ಟಿಯಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ವಿಭಾಗದಲ್ಲಿ ಸ್ಥಾನ ಪಡೆದಿದೆ. ಕಳೆದ ವರ್ಷ ಜನವರಿಯಲ್ಲಿ ನಡೆದ ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಶೇಷ ಜ್ಯೂರಿ (ಇಂಪ್ಯಾಕ್ಟ್ ಫಾರ್ ಚೇಂಜ್) ಮತ್ತು ಪ್ರೇಕ್ಷಕರ ಪ್ರಶಸ್ತಿಗಳನ್ನು ಗೆದ್ದಿದ್ದು, ಅಂದಿನಿಂದ 20 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಸಾಕ್ಷ್ಯಚಿತ್ರ ಪಡೆದುಕೊಂಡಿದೆ. ಇದೀಗ ಪ್ರತಿಷ್ಠಿತ ಆಸ್ಕರ್​​ಗೆ ನಾಮನಿರ್ದೇಶನಗೊಂಡಿದ್ದು, ಭಾರತದ ಪ್ರಶಸ್ತಿ ಆಸೆಗೆ ಬಲ ನೀಡಿದೆ. 

ಈಗಾಗಲೇ ಸನ್‌ಡಾನ್ಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಗೆದ್ದಿದೆ. ಈ ಚಿತ್ರ ಇದುವರೆಗೆ 20 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಮತ್ತು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಈಗ ಈ ಸಿನಿಮಾದ ಬಗ್ಗೆ ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಈ ಚಿತ್ರ ಭಾರತಕ್ಕೆ ಖಂಡಿತ ಆಸ್ಕರ್ ತಂದುಕೊಡಲಿದೆ ಎಂಬ ನಂಬಿಕೆ ಇದೆ.

ಸಾಕ್ಷಿಚಿತ್ರಗಳ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಇತರ ಚಿತ್ರಗಳೆಂದರೆ ಅಸೆನ್ಶನ್, ಅಟಿಕಾ ಮತ್ತು ಫ್ಲೀ ಮತ್ತು ಸಮ್ಮರ್ ಆಫ್ ದಿ ಸೋಲ್. ಇನ್ನು ರೈಟಿಂಗ್ ವಿತ್ ದಿ ಫೈರ್ ಚಿತ್ರವನ್ನು ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಇಬ್ಬರ ವೃತ್ತಿ ಬದುಕಿನ ಮೊದಲ ಸಾಕ್ಷ್ಯಚಿತ್ರ ಇದಾಗಿದೆ. ಮಹಿಳಾ ಪತ್ರಕರ್ತೆ ಎದುರಿಸಬೇಕಾದ ಸವಾಲುಗಳ ಕುರಿತ ಸಿನಿಮಾ ಇದಾಗಿದೆ.