ಮನೆ ಯೋಗಾಸನ ಯೋಗಾಸನ: ಕಿವಿ ಸೋರುವ, ಅಕ್ಷಿಪಟದ ಸ್ಥಾನಪಲ್ಲಟಗಳಿಂದ ಪೀಡಿತರಾದವರಿಗೆ ಎಚ್ಚರಿಕೆ ಕ್ರಮ 

ಯೋಗಾಸನ: ಕಿವಿ ಸೋರುವ, ಅಕ್ಷಿಪಟದ ಸ್ಥಾನಪಲ್ಲಟಗಳಿಂದ ಪೀಡಿತರಾದವರಿಗೆ ಎಚ್ಚರಿಕೆ ಕ್ರಮ 

0

ಈ ಮೇಲಿನ ನ್ಯೂನತೆಗೆ ಒಳಗಾದವರು ತಲೆ ಕೆಡಗು ಮಾಡಬೇಕಾದ ಆಸನಭ್ಯಾಸಗಳಲ್ಲಿ ಖಂಡಿತ ತೊಡಗಬಾರದು.

ಸ್ತ್ರೀಯರಿಗಾಗಿ ವಿಶೇಷ ವಿಧಿಗಳು :

ಬಹಿಷ್ಠೆಯರಾದಾಗ :- ಈ ಸಮಯದಲ್ಲಿ ಸ್ತ್ರೀಯರು ಆಸನಭ್ಯಾಸಗಳ ಗೋಜಿಗೆ ಹೋಗದಿರುವುದು ಉತ್ತಮ. ಆದರೆ ರಕ್ತಸ್ರಾವವು ಎಂದಿಗಿಂತಲೂ ಹೆಚ್ಚಾಗಿದ್ದಲ್ಲಿ ʼಉಪವಿಷ್ಟ ಕೋಣಾಸನʼ,  ʼಬದ್ದಕೋಣಾಸನʼ, ʼವೀರಾಸನʼ, ʼಜಾನುಶೀರ್ಷಾಸನʼ, ʼಪಶ್ಚಿಮೋತ್ಥಾಸನʼ, ʼಉತ್ಥಾನಾಸನʼ ಇವುಗಳ ಅಭ್ಯಾಸವು ಉತ್ತಮ ಫಲ ಕೊಡುವುದು. ಆದರೆ ಬಹಿಷ್ಠೆಯರು ಎಂದಿಗೂ ʼಶೀರ್ಷಾಸನದʼ ಅಭ್ಯಾಸದಲ್ಲಿ ತೊಡಗಬಾರದು.     

ಗರ್ಭಿಣಿಯರ ವಿಷಯದಲ್ಲಿ :

ಗರ್ಭವತಿಯರಾದ ಮೊದಲನೇ ಮೂರು ತಿಂಗಳುಗಳಲ್ಲಿ ಯಾವ ವಿಧವಾದ ಆಸನ ಬೇಕಾದರೂ ಅಭ್ಯಾಸಿಸಲು ಅಡ್ಡಿಯಿಲ್ಲ. ಅವರು ನಿಂತುಮಾಡುವ ಇಲ್ಲವೇ ಮುಂದಕ್ಕೆ ಆಸನಗಳನ್ನು ಸರಳವಾದ ಚಲನವಲಗಳಿಂದ ಅಭ್ಯಾಸ ಬೇಕು. ಏಕೆಂದರೆ ಗರ್ಭಧರಿಸುವ ಸಮಯದಲ್ಲಿ ಅವರ ಬೆನ್ನು ಉರಿಗೊಳ್ಳಬೇಕು. ಆದರೆ, ಅವರ ಹೊಟ್ಟೆಯ ಮೇಲೆ ಯಾವ ವಿಧದ ಒತ್ತಡವು ಉಂಟಾಗಬಾರದು. ಗರ್ಭಿಣಿಯರು ʼಬದ್ಧಕೋಣಾಸನʼವನ್ನು ಮತ್ತು ʼಉಪಯುಕ್ತ ಕೋಣಾಸನವನ್ನು ದಿನದ ಯಾವ ಸಮಯದಲ್ಲಾದರೂ ಅಭ್ಯಾಸಿಸಬಹುದು. ಊಟ ಮಾಡಿದ ಮೇಲೆ ಇವರ ಅಭ್ಯಾಸಕ್ಕೆ ಅಡ್ಡಿಯಿಲ್ಲ. ಆದರೆ ದೇಹವನ್ನು ಮುಂಬಾಗಿಸಬೇಕಾದ ಆಸನಗಳನ್ನು ಮಾತ್ರ ಆಹಾರ ಸೇವಿಸಿದ ಮೇಲೆ ಆಚರಿಸಲಾಗದು. ಮೊದಲಿನ ಎರಡು ಆಸನಗಳು ಸ್ತ್ರೀಯರ ವಸ್ತಿಕುಹರ (pelvis) ಮತ್ತು ಕಿರುಬೆನ್ನು(small of the back) ಇವುಗಳ ಮಾಂಸಖಂಡಗಳಿಗೆ ಬಲ ಕೊಡುವುದಲ್ಲ̧ದೆ ಪ್ರಸವವೇದನೆಯನ್ನ ಸಾಕಷ್ಟು ತಗ್ಗಿಸುತ್ತದೆ. ಅಲ್ಲದೆ ಅವರು ಕುಂಭಕಪ್ರಾಣಾಯಾಮವನ್ನು (ಉಸಿರನ್ನು ಒಳಗೆ ನಿಲ್ಲಿಸುವ ವಿಧಿಯನ್ನು) ಬಿಟ್ಟು, ರೇಚಕ (ಉಸಿರನ್ನು ಹೊರಗೆ ಬಿಡುವುದು), ಪೂರಕ (ಉಸಿರನ್ನು ಒಳಕ್ಕೆ ತುಂಬೋದು) — ಈ ಕ್ರಮವನ್ನು ಗರ್ಭಸ್ಥಾಕಾಲದುದ್ದಕ್ಕೂ ಅಭ್ಯಾಸ ಮಾಡುವುದು ಒಳ್ಳೆಯದು, ಏಕೆಂದರೆ, ಕ್ರಮವರಿತು ಮಾಡಿದ ಧೀರ್ಘವಾದ ಉಸಿರಾಟವು ಸುಖಪ್ರಸಾರವಾಗುವುದಕ್ಕೆ ತುಂಬಾ ಸಹಕಾರಿ.

ಶಿಶು ಜನನವಾದಮೇಲೆ (ಪ್ರಸವಿಸಿದ ಬಳಿಕ)

ಸ್ತ್ರೀಯರು ಪ್ರಸವಿಸಿದ ಒಂದು ತಿಂಗಳ ಕಾಲ ಆಸನಬ್ಯಾಸಕ್ಕೆ ಖಂಡಿತ ತೊಡಗಬಾರದು. ಆಮೇಲೆ ಹಗುರವಾದ ಹಾಸನ ಅಭ್ಯಾಸಗಳಲ್ಲಿ ಕ್ರಮವಾಗಿ ಮುಂದುವರಿಯಬಹುದು. ಈ ಬಳಿಕ ಒಂದನೇ ಅನುಬಂಧದಲ್ಲಿ ಸೂಚಿಸಿರುವಂತೆ ಕ್ರಮಕ್ರಮವಾಗಿ ಅಭ್ಯಾಸೀಸುವುದು ಉತ್ತಮ ಶಿಶು ಜನನದ ಮೂರು ತಿಂಗಳ ಮೇಲೆ ಎಲ್ಲಾ ಆಸನಗಳನ್ನು ಅಭ್ಯಾಸಸಬಹುದು.

ಆಸನಾಭ್ಯಾಸಗಳಿಂದಾಗುವ ಪರಿಣಾಮಗಳು, ಸತ್ಫಲಗಳು :

ಆಸನಾಭ್ಯಾಸಿಗಳಲ್ಲಿ ಕ್ರಮ ತಪ್ಪಿದರೆ, ಅದರಿಂದ ಶರೀರಕ್ಲೇಶ, ಮನಸ್ಸಿಗೆ ಅಶಾಂತಿ, ತಲೆದೂರುತ್ತದೆ. ಅಭ್ಯಾಸ ಕ್ರಮದಲ್ಲಿ ತಪ್ಪಿರುವುದಕ್ಕೆ ಈ ಸೂಚನೆಗಳೇ ಸಾಕು. ಅಭ್ಯಾಸಿಗೆ ತಾನೂ ಕ್ರಮ ತಪ್ಪಿದ ಅರಿವಾಗದಿದ್ದರೆ, ಈ ಆಸನಾಭ್ಯಾಸಗಳಲ್ಲಿ ಚೆನ್ನಾಗಿ ನುರಿತವರಿಂದ ಮಾರ್ಗದರ್ಶನ ಪಡೆಯುವುದು ಉತ್ತಮ. 

ಆಸನಗಳನ್ನ ಕ್ರಮವರಿತು ಆಸಕ್ತಿಯಿಂದ ಅಭ್ಯಾಸದಲ್ಲಿ ದೇಹದಲ್ಲಿ ಲವಲವಿಕೆ, ಮನಸ್ಸಿನಲ್ಲಿ ಉಲ್ಲಾಸ ಮೂಡುತ್ತದೆ. ಇದರ ಫಲವೆಂದರೆ ಆತ್ಮಾನಂದ. ಹೀಗೆ ಕ್ರಮವರಿತು ಆಚರಿಸಿದ ಆಸನಗಳು ಅಭ್ಯಾಸಕನ ದೇಹ ಮನಸ್ಸು ಆತ್ಮಗಳ ಐಕ್ಯ ಭಾವವನ್ನು ಮಾಡುತ್ತದೆ.            

ಈ ಬಗೆಯಲ್ಲಿ ಅಂದರೆ ಕ್ರಮವರಿತು ನಡೆಸಿದ ಆಸನಭ್ಯಾಸವು ಅಭ್ಯಾಸಿಯ ಚಹರೆಯನ್ನು ಉತ್ತಮ ರೀತಿಯಲ್ಲಿ ಮಾರ್ಪಡಿಸುವುದು ಮಾತ್ರವಲ್ಲದೆ, ಅಭ್ಯಾಸಯು ತನ್ನ ಆಹಾರ ವ್ಯವಹಾರದಲ್ಲಿ ನಡೆನುಡಿಯಲ್ಲಿ ಆಚಾರಶೀಲಗಳಲ್ಲಿ ಶುಚಿತ್ವದಲ್ಲಿ ಶಿಸ್ತನ್ನಳವಡಿಸಿಕೊಂಡು ಹೊಸ ಹುರುಪು ತುಂಬಿದ ಹೊಸ ಮನುಷ್ಯನಾಗಿ ಪರಿಣಮಿಸುತ್ತಾನೆ.

ಆಸನಭ್ಯಾಸದಲ್ಲಿ ನೈಪುಣ್ಯತೆಯನ್ನು ಪಡೆದವನಿಗೆ ಶ್ರಮವಿಲ್ಲದೆಯೇ ಸುಲಭವಾಗಿ ಆಸನವೂ ಕೈವಶವಾಗಿ ಯಾವ ಕ್ಲೇಶವೂ ತಲೆದೋರದ ಸ್ಥಿತಿ ಲಭಿಸುತ್ತದೆ. ಅಲ್ಲದೆ ಶರೀರದ ಅಂಗಾಂಗಗಳ ಚಲನೆಗಳು ದೇಹಕ್ಕೆ ಒಂದು ಬಗೆಯ ಸೊಬಗನ್ನು ನೀಡುತ್ತದೆ. ಆಸನಗಳನ್ನು ಅಭ್ಯಾಸಿಸುವಾಗ ಅಭ್ಯಾಸಿಯ ದೇಹವು ಸೃಷ್ಟಿಯ ಜೀವರಾಶಿಗಳಲ್ಲಿ ಅಂದರೆ ಅತ್ಯಾಲ್ಪಕ್ರೀಮಿವರ್ಗದಿಂದಾರಂಭಿಸಿ ಅತಿ ಶ್ರೇಷ್ಠನಾದ ಯೋಗಿಯವರೆಗಿನ ದೇಹಾಕಾರಗಳನ್ನ ತಾಳುವುದರಿಂದ ಸಮಸ್ತ ಜೀವ ರಾಶಿಗಳ ದೇಹಗಳಲ್ಲಿ ಅಂತರ್ಯಾಮಿಯಾಗಿರುವವನು. ಪರಮಾತ್ಮನು ಒಬ್ಬನೇ ಎಂಬ ಭಾವವನ್ನು ಅವನಲ್ಲಿ ಮೂಡಿರುತ್ತದೆ.

ಇದಕ್ಕೆ ಆಧಾರವಾಗಿ ಶ್ರೀಕೃಷ್ಣನ ವಚನಗಳು ಹೀಗಿವೆ :

ಈಶ್ವರಃ ಸರ್ವಭೂತಾನಾಂ ಹೃದೇಂಶೇsರ್ಜುನ ತಿಷ್ಟತಿ |

ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ||

                                                             –ಭ. ಗೀ. ೧೮-೬೧

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||

                                                              –ಭ. ಗೀ. ೫-೧೮

ಅಂದರೆ, ಈಶ್ವರನು (ಆತ್ಮನು) ಸಮಸ್ತ ಭೂತಗಳ ಹೃದಯದಲ್ಲಿಯೂ ಕುಳಿತು ಮಾಯೆಯಿಂದ ದೇಹ ಯಂತ್ರವನ್ನು ಸೇರಿರುವ ಸಕಲ ಪ್ರಾಣಿಗಳ ಚಲನವಲನಗಳಿಗೂ ಕಾರಣವಾಗಿ ಅದನ್ನು ತಿರುಗಿಸುತ್ತಿರುತ್ತಾನೆ. ಅಲ್ಲದೆ ವಿದ್ಯಾವಿನಗಳಿಂದೊಡಗೂಡಿದ ಬ್ರಾಹ್ಮಣದಲ್ಲಿಯೂ, ಗೋವಿನಲ್ಲಿಯೂ, ಆನೆಯಲ್ಲಿಯೂ, ನಾಯಿಯಲ್ಲಿಯೂ, ನಾಯಿಯನ್ನು ತಿನ್ನುವ ಚಂಡಾಲನಲ್ಲಿಯೂ, ಅಂದರೆ ವಿವಿಧ ದೇಹಗಳನ್ನು ಹೊಂದಿದ ಸಮಸ್ತ ಜೀವ ರಾಶಿಗಳನ್ನು ವ್ಯಾಪಿಸಿರುವ ಆತ್ಮನ ಇರುವಿಕೆಯನ್ನು ಇಳಿದು ಅವುಗಳೆಲ್ಲ ಒಂದೇ ಎಂದು ಆತ ಭಾವಿಸುವನು. ಅಂದರೆ ಸಮದರ್ಶಿಗಳೇ ವಿಜ್ಞಾನಿಗಳು ಎಂಬ ಭಾವ.          

ಈ ವಿಧವಾದ ಮನೋಭಾವವುಳ್ಳ ಯೋಗಸನಭ್ಯಾಸಿಯು ವಿವಿಧ ಆಸನಗಳ ಅಭ್ಯಾಸದಲ್ಲಿ ತೊಡಗಿದ್ದಾಗ ತನ್ನೊಳಹೊಕ್ಕು ಸರ್ವಾಂತರ್ಯಾಮಿಯಾದ ಪರಮಾತ್ಮನ ಇರುವಿಕೆಯನ್ನು ತಿಳಿದು, ಅದಕ್ಕೆ ಅವನು ಶರಣಾಗಿ, ಈ ಮೂಲಕ ಅಂದರೆ ಆತ್ಮ ಸಾಕ್ಷಾತ್ಕಾರದಿಂದ ಮುಕ್ತಿಯನ್ನ ಪಡೆಯುತ್ತಾನೆ. ಇದೇ ಯೋಗಾಭ್ಯಾಸಕನಿಗೆ ದೊರಕುವ ಅತ್ಯಧಿಕ ಪಲ.  

ಈ ಮುಂದೆ ವಿವಿಧ ಯೋಗಾಸನಗಳ ವಿವರಣೆಯನ್ನ ವಿಶದವಾಗಿ ಕೊಟ್ಟಿದೆ. ಅಂದರೆ ಯೋಗಾಸನಗಳ ಹೆಸರು, ಆ ನಾಮಕರಣಕ್ಕೆ ಕಾರಣ, ಅವುಗಳಲ್ಲಿ ವಿವಿಧ ಭಂಗಿಗಳನ್ನು ಅಭ್ಯಾಸಿಸುವ ಕ್ರಮ (ತಂತ್ರ) ಮತ್ತು ಪ್ರತೀ ಯೋಗಸನವನ್ನು ಕ್ರಮವರಿತು ಅಭ್ಯಾಸಿಸುವುದರಿಂದ ಆಗುವ ಪರಿಣಾಮಗಳು, ಅಂದರೆ ಸತ್ಫಾಲಗಳು — ಇವುಗಳನ್ನು ಪ್ರತಿಯೊಂದು ಆಸನಕ್ಕೂ ಅಳವಡಿಸಿದೆ. ಈ ಗ್ರಂಥದಲ್ಲಿ ಸುಮಾರು 202 ಆಸನಗಳು ಮತ್ತು ಬಂಧಗಳು ಹಾಗೂ ಅವುಗಳ 602 ಭಂಗಿಗಳ ವಿವರಗಳನ್ನು ಕೊಟ್ಟಿದೆ.