ಮನೆ ರಾಜ್ಯ ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಡಾ. ಎಂ.ಎ. ಸಲೀಂ ನೇಮಕ

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಡಾ. ಎಂ.ಎ. ಸಲೀಂ ನೇಮಕ

0

ಬೆಂಗಳೂರು : ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ.ಎಂಎ ಸಲೀಂ ನೇಮಿಸಲಾಗಿದೆ.

ರಾಜ್ಯ ಸರ್ಕಾರದಿಂದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕನ್ನಡಿಗರಾದ ಡಾ. ಎಂ.ಎ. ಸಲೀಂ ಅವರನ್ನು ನೂತನ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರ್ದೇಶಕರು (ಡಿಜಿ & ಐಜಿಪಿ) ಆಗಿ ನೇಮಕ ಮಾಡುವುದಾಗಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಅಪರಾಧ ತನಿಖಾ ಇಲಾಖೆ, ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಂ.ಎ. ಸಲೀಂ (ಐಪಿಎಸ್ – 1993 ಬ್ಯಾಚ್) ಅವರನ್ನು ಈಗ ರಾಜ್ಯದ ಪೊಲೀಸ್ ವ್ಯವಸ್ಥೆಯ ಉನ್ನತ ಹುದ್ದೆಗೆ ಎಳೆದುಕೊಂಡು ಬರುತ್ತಿರುವುದು ಪ್ರಮುಖ ಬೆಳವಣಿಗೆ ಎಂದು ಶ್ರೇಣಿಗೊಳಿಸಲಾಗಿದೆ.

ಈ ಹುದ್ದೆಯಲ್ಲಿದ್ದ ಡಾ. ಅಲೋಕ್ ಮೋಹನ್ (ಐಪಿಎಸ್ – 1987 ಬ್ಯಾಚ್) ಅವರು ಇದೇ ದಿನದ ಮಧ್ಯಾಹ್ನ ಸೇವೆಯಿಂದ ಅಧಿಕೃತವಾಗಿ ನಿವೃತ್ತಿಯಾಗುತ್ತಿದ್ದಾರೆ. ಅವರ ನಿವೃತ್ತಿಯೊಂದಿಗೇ ಈ ಹುದ್ದೆಯನ್ನ ಡಾ. ಸಲೀಂ ಅವರು ಅಲಂಕರಿಸಲಿದ್ಧಾರೆ. ಡಾ. ಸಲೀಂ ಅವರ ನೇಮಕಾತಿ ಕೂಡ 2025ರ ಮೇ 21ರ ಮಧ್ಯಾಹ್ನದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರದ ಪ್ರಕಟಣೆ ಸ್ಪಷ್ಟಪಡಿಸಿದೆ.

ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾದ ನಂತರ, 1993 ರಲ್ಲಿ ಡಾ. ಎಂ. ಎ. ಸಲೀಂ ಅವರ ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಯಲ್ಲಿ ಅವರ ಅದ್ಭುತ ವೃತ್ತಿಜೀವನ ಪ್ರಾರಂಭವಾಯಿತು. ಕರ್ನಾಟಕ ರಾಜ್ಯ ಪೊಲೀಸರೊಂದಿಗಿನ ಅವರ ಸೇವಾವಧಿಯು ಬಹುಮುಖತೆ ಮತ್ತು ಶ್ರೇಷ್ಠತೆಯಿಂದ ಗುರುತಿಸಲ್ಪಟ್ಟಿದೆ, ರಾಜ್ಯಾದ್ಯಂತ 26 ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮತ್ತು ಹಾಸನದಂತಹ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಪೂರ್ವ ವಲಯದ ಪೊಲೀಸ್ ಮಹಾನಿರ್ದೇಶಕ, ಮೈಸೂರು ನಗರದ ಪೊಲೀಸ್ ಆಯುಕ್ತ ಮತ್ತು ಬೆಂಗಳೂರಿನಲ್ಲಿ ವಿಶೇಷ ಪೊಲೀಸ್ ಆಯುಕ್ತರಂತಹ ಹಿರಿಯ ಹುದ್ದೆಗಳವರೆಗೆ ಕೆಲಸ ಮಾಡಿದ್ದಾರೆ.

ಕನ್ನಡಿಗರಾದ ಡಾ. ಸಲೀಂ ಅವರನ್ನು ಡಿಜಿ & ಐಜಿಪಿ ಹುದ್ದೆಗೆ ನೇಮಕ ಮಾಡಿರುವುದು ರಾಜ್ಯದ ಹಿತಾಸಕ್ತಿಯನ್ನೂ ಪ್ರತಿಬಿಂಬಿಸುವಂತದ್ದು. ರಾಜ್ಯದ ಆಡಳಿತ ಯಂತ್ರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ಸಿಗುವುದು ಆಶಯದ ಸಂಗತಿಯಾಗಿದೆ ಎಂದು ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.