ರಾಯಚೂರು : ಬಿಸಿಲಿನ ಅಬ್ಬರ ಜೋರಾದ ಹಿನ್ನೆಲೆ ಬಿಯರ್, ಲಿಕ್ಕರ್ ವ್ಯಾಪಾರ ಸಹ ಜೋರಾಗಿದೆ. ಮಾರ್ಚ್ ತಿಂಗಳಿಗಿಂತ ಏಪ್ರಿಲ್ನಲ್ಲಿ 13 ಸಾವಿರ ಕಾಟನ್ ಬಾಕ್ಸ್ ಬಿಯರ್ಗಿಂತ ಹೆಚ್ಚು ಮಾರಾಟವಾಗಿದೆ.
ಬಿಸಿಲಿನ ತಾಪದಿಂದ ಪಾರಾಗಲು ಜನ ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಇತ್ತ ಮದ್ಯ ಪ್ರಿಯರು ಬಿಯರ್ಗೆ ಮೊರೆ ಹೋಗಿದ್ದಾರೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಭರ್ಜರಿ ಆದಾಯ ಹರಿದು ಬರುತ್ತಿದೆ.
ಜಿಲ್ಲೆಯಲ್ಲಿ ಇದೇ ಮಾರ್ಚ್ನಲ್ಲಿ 82,151 ಬಾಕ್ಸ್ ಬಿಯರ್ ಮಾರಾಟವಾಗಿತ್ತು, ಏಪ್ರಿಲ್ ತಿಂಗಳ 25 ದಿನದಲ್ಲಿ ಕೆಎಸ್ಬಿಸಿಎಲ್ 95,319 ಬಾಕ್ಸ್ ಸರಬರಾಜು ಮಾಡಿದೆ. ಇನ್ನೂ ಕಳೆದ ವರ್ಷ ಏಪ್ರಿಲ್ ತಿಂಗಳಿಗಿಂತ ಈ ವರ್ಷ ಏಪ್ರಿಲ್ ತಿಂಗಳಲ್ಲಿ ರಾಯಚೂರು ಕೆಎಸ್ಬಿಸಿಎಲ್ನಲ್ಲಿ 10 ಸಾವಿರ ಬಾಕ್ಸ್ಗೂ ಹೆಚ್ಚು ಬಿಯರ್ ಮಾರಾಟವಾಗಿದೆ.
ಇಂಡಿಯನ್ ಮೇಡ್ ಲಿಕ್ಕರ್ ವ್ಯಾಪಾರ ಸಹ ಜೋರಾಗಿದ್ದು, ಸೇಲ್ಸ್ನಲ್ಲಿ ಹೆಚ್ಚಳವಾಗಿದೆ. ರಾಯಚೂರು ಕೆಎಸ್ಬಿಸಿಎಲ್ನಲ್ಲಿ ಕಳೆದ ವರ್ಷ ಏಪ್ರಿಲ್ಗಿಂತ ಈ ವರ್ಷ ಏಪ್ರಿಲ್ನಲ್ಲಿ 8 ಸಾವಿರ ಬಾಕ್ಸ್ಗೂ ಅಧಿಕ ಲಿಕ್ಕರ್ ಮಾರಾಟವಾಗಿದೆ.
ಅಚ್ಚರಿ ಎನ್ನುವಂತೆ ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್ ತಿಂಗಳಿಗಿಂತ ಏಪ್ರಿಲ್ನಲ್ಲಿ 16 ಸಾವಿರ ಬಾಕ್ಸ್ ಹೆಚ್ಚುವರಿ ಲಿಕ್ಕರ್ ಸೇಲ್ ಆಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಲ್ಲಿ ಬೇಗನೆ ಸ್ಟಾಕ್ ಖಾಲಿಯಾಗುತ್ತಿದೆ. ಬಿಯರ್ ಮಾತ್ರವಲ್ಲದೆ ಲಿಕ್ಕರ್ ಸಹ ಈ ಬೇಸಿಗೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.















