ಮನೆ ಸುದ್ದಿ ಜಾಲ ಓಮಿಕ್ರಾನ್ ಭೀತಿ ನಡುವೆಯೂ ಸಂಕ್ರಾಂತಿಗೆ ಸಡಗರದ ಸಿದ್ಧತೆ

ಓಮಿಕ್ರಾನ್ ಭೀತಿ ನಡುವೆಯೂ ಸಂಕ್ರಾಂತಿಗೆ ಸಡಗರದ ಸಿದ್ಧತೆ

0
xf6ahf/df pv' laqmL emfkfsf] nvgk'/l:yt xf6ahf/df pv' a]Rb} Jofkf/L . tl:a/ M o1/fh cfªb]Da], /f;;

ಬೆಂಗಳೂರು: ದೇಶದೆಲ್ಲೆಡೆ ಒಮಿಕ್ರಾನ್ ಮಹಾಮಾರಿ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿರುವ ಬೆನ್ನಲ್ಲೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬಕ್ಕೆ ಸಿದ್ದತೆಗಳು ಜೋರಾಗಿದೆ.

ಸಂಕ್ರಾಂತಿ ಹಬ್ಬಕ್ಕಾಗಿ ನಗರಕ್ಕೆ ಬಂದಿದೆ ರಾಶಿ ರಾಶಿ ಕಬ್ಬು. ಮತ್ತೊಂದೆಡೆ ಕಡಲೆಕಾಯಿ, ಅವರೆಕಾಯಿ, ಗೆಣಸು ಕೂಡ ಆಗಮಿಸುತ್ತಿದ್ದು, ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಮನೆಮಾಡಿದೆ.

ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ಖರೀದಿ ಆರಂಭವಾಗಿದ್ದು, ಒಂದೆಡೆ ಕಡಲೆಕಾಯಿ, ಗೆಣಸು, ಅವರೆಕಾಯಿ, ಎಳ್ಳು-ಬೆಲ್ಲಗಳ ಘಮ, ಸಕ್ಕರೆ ಅಚ್ಚುಗಳ ಆಕರ್ಷಣೆ, ಎಳ್ಳು-ಬೆಲ್ಲ ತುಂಬಿಕೊಡುವ ಬಗೆ ಬಗೆಯ ಗಿಫ್ಟ್‍ಗಳು… ಖರೀದಿಯ ಭರಾಟೆ ಆರಂಭವಾಗಿದೆ.

ಹಬ್ಬದ ಸಂಭ್ರಮಕ್ಕೆ ಈ ಬಾರಿ ಅವರೆಕಾಯಿ, ಕಡಲೆಕಾಯಿಯ ಆಗಮನದ ಭರಾಟೆ ಕೊಂಚ ಕಡಿಮೆಯಾದೆ. ಇವೆರಡೂ ಸ್ವಲ್ಪ ದುಬಾರಿಯಾಗಿವೆ.  ಎಳ್ಳು-ಬೆಲ್ಲಗಳ ಮಿಶ್ರಣವೂ ಅಂಗಡಿಗಳಿಗೆ ಬಂದಿದೆ. ಶನಿವಾರ ಸಂಕ್ರಾಂತಿ ಹಬ್ಬವಿದೆ. ಈ ಬಾರಿ ಹಬ್ಬದ ಆಚರಣೆಗೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಲಿದೆ. ಆದರೂ ಮನೆ- ಮನೆಗಳಲ್ಲಿ ಹಬ್ಬವನ್ನು ಆಚರಿಸಿಕೊಳ್ಳಲು ನಗರದ ಜನ ಸಜ್ಜಾಗಿದ್ದಾರೆ.

ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತಪುರ, ಬಸವನಗುಡಿ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್.ಪುರ ಮತ್ತಿತರ ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ರಂಗೇರಿದೆ. ಕೆ.ಆರ್. ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳಿಗೆ ಲೋಡ್‍ಗಟ್ಟಲೆ ಕಬ್ಬು ಬಂದಿದೆ. ಹೇಳಿ ಕೇಳಿ ಸಂಕ್ರಾಂತಿ ಹಬ್ಬಕ್ಕೆ ಕಬ್ಬು ಬಹುಬೇಡಿಕೆಯುಳ್ಳದ್ದಾಗಿದೆ. ಹೀಗಾಗಿ ಕರಿಕಬ್ಬು, ಬಿಳಿ ಕಬ್ಬು ಇತ್ಯಾದಿಗಳು ಆಗಮಿಸಿವೆ.

ಕೆ.ಆರ್. ಮಾರುಕಟ್ಟೆಗೆ ಸಾಮಾನ್ಯ ದಿನಗಳಲ್ಲಿ 4-5 ಲಾರಿ ಲೋಡ್ ಕಬ್ಬು ಬಂದರೆ, ಸಂಕ್ರಾಂತಿಗೆ 10 ಲಾರಿ ಲೋಡ್‍ಗೂ ಅಧಿಕ ಕಬ್ಬು ಆಗಮಿಸುತ್ತದೆ. ಈ ಬಾರಿ ರಾಜ್ಯಾದ್ಯಂತ ಒಳ್ಳೆಯ ಮಳೆಯಾಗಿದೆ. ಎಲ್ಲೆಡೆ ಕಬ್ಬಿನ ಬೆಳೆಯೂ ಉತ್ತಮವಾಗಿದೆ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ಕಬ್ಬಿನ ಇಳುವರಿ ಶೇ.20ರಷ್ಟು ಹೆಚ್ಚಾಗಿದೆ. ಹೀಗಾಗಿ, ಹಬ್ಬಕ್ಕೆ ಕಬ್ಬಿನ ಕೊರತೆ ಇರುವುದಿಲ್ಲ. ಆದರೆ, ಅಧಿಕ ಮಳೆಯಿಂದಾಗಿ ಈ ಬಾರಿ ಕಡಲೆಕಾಯಿ, ಅವರೆಕಾಯಿ ಬೆಳೆಗೆ ಹಾನಿ ಉಂಟಾಗಿದೆ. ಉತ್ತಮ ಇಳುವರಿಯಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾರದ ಕಾರಣ ಬೆಲೆಗಳು ಕೂಡ ಕೆ.ಜಿ.ಗೆ 70-80 ರೂ. ನಂತೆ ಮಾರಾಟವಾಗುತ್ತಿವೆ. ಸಿಹಿ ಗೆಣಸು 20-30ರೂ.ಗೆ ಮಾರಾಟವಾಗುತ್ತಿದೆ.


ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 250-300 ರೂ.ಗೆ ಮಾರಾಟವಾಗುತ್ತಿದೆ. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚುಗಳೂ ಆಗಮಿಸಿವೆ.

ಸಂಕ್ರಾಂತಿಗೆ ವೀಕೆಂಡ್‍ ಕರ್ಫ್ಯೂ ಅಡ್ಡಿ
ಅಂದ ಹಾಗೆ ಶನಿವಾರ ಸಂಕ್ರಾಂತಿ ಹಬ್ಬ. ಆದರೆ ವಾರಾಂತ್ಯದಲ್ಲಿ ಸರಕಾರ  ಕರ್ಫ್ಯೂ ವಿಧಿಸಿರುವುದರಿಂದ ಹಬ್ಬದ ಆಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮಾರಾಟಗಾರರು ಹಬ್ಬದ ಸಾಮಗ್ರಿಗಳನ್ನು ಖರೀದಿಸಿ ತಂದರೆ, ಅಂದು ವ್ಯಾಪಾರಕ್ಕೆ ಅವಕಾಶ ಸಿಕ್ಕಿದರೂ ಕೂಡ ಗ್ರಾಹಕರು ಬರಬೇಕಲ್ಲವೇ ಎಂಬುದು ವ್ಯಾಪಾರಿಗಳ ಆತಂಕವಾಗಿದೆ. ಜನರು ಮನೆಯಲ್ಲಿಯೇ ಸರಳವಾಗಿ ಸಂಕ್ರಾಂತಿ ಆಚರಿಸಲು  ಸಿದ್ಧರಾಗುತ್ತಿದ್ದಾರೆ.

ಹಿಂದಿನ ಲೇಖನಕೊರೋನಾ ಅಬ್ಬರ: 1.94 ಲಕ್ಷ ಹೊಸ ಪ್ರಕರಣ ಪತ್ತೆ, 442 ಮಂದಿ ಸಾವು
ಮುಂದಿನ ಲೇಖನಮಾನಸ ಗಂಗೋತ್ರಿಯ ಆವರಣದಲ್ಲಿ ಅರಳಿ ನಿಂತ ಟಬುಬಿಯಾ ಹೂ