ಮನೆ ಆರೋಗ್ಯ ಒಂದೇ ದಿನ 10 ಸಾವಿರ ನೂತನ ಕೋವಿಡ್ ಪ್ರಕರಣ ಪತ್ತೆ

ಒಂದೇ ದಿನ 10 ಸಾವಿರ ನೂತನ ಕೋವಿಡ್ ಪ್ರಕರಣ ಪತ್ತೆ

0

ನವದೆಹಲಿ: ದೇಶದಾದ್ಯಂತ ಗುರುವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸದಾಗಿ 10,158 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Join Our Whatsapp Group

ಸಕ್ರಿಯ ಪ್ರಕರಣಗಳ ಸಂಖ್ಯೆ 44,998ಕ್ಕೆ ಏರಿಕೆಯಾಗಿದೆ.ದೈನಂದಿನ ಕೋವಿಡ್ ದೃಢ ಪ್ರಮಾಣ ಶೇ 4.42 ಮತ್ತು ವಾರದ ಪಾಸಿಟಿವಿಟಿ ದರ 4.02 ಆಗಿದೆ.ಈವರೆಗೆ ಒಟ್ಟು 4,42,10,127 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು ಸೋಂಕಿತರ ಪೈಕಿ ಶೇ 0.10 ಸಕ್ರಿಯ ಪ್ರಕರಣಗಳಿವೆ. ಹಾಗೆಯೇ ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ 98.71 ಆಗಿದೆ. ದೇಶದಲ್ಲಿ ಈವರೆಗೆ 220.66 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಿಸಲಾಗಿದೆ.

ಹಿಂದಿನ ಲೇಖನಕೈ ತಪ್ಪಿದ ಟಿಕೆಟ್: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ
ಮುಂದಿನ ಲೇಖನಅಕ್ರಮ ಹಣ ವರ್ಗಾವಣೆ: 22 ಕಡೆಗಳಲ್ಲಿ ಇಡಿ ದಾಳಿ