ಮನೆ ತಂತ್ರಜ್ಞಾನ 7ನೇ ವಾರ್ಷಿಕೋತ್ಸವ: ಬಳಕೆದಾರರಿಗೆ ಆಕರ್ಷಕ ಆಫರ್ ನೀಡಿದ ರಿಲಯನ್ಸ್ ಜಿಯೋ

7ನೇ ವಾರ್ಷಿಕೋತ್ಸವ: ಬಳಕೆದಾರರಿಗೆ ಆಕರ್ಷಕ ಆಫರ್ ನೀಡಿದ ರಿಲಯನ್ಸ್ ಜಿಯೋ

0

ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಆಕರ್ಷಕ ಆಫರ್ ​ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಜೊತೆಗೆ ಬಳಕೆದಾರರನ್ನೂ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೆ ತನ್ನ ಆಯ್ದ ಪ್ರಿಪೇಯ್ಡ್ ಪ್ಲಾನ್ ​ನಲ್ಲಿ ಓಟಿಟಿ ಪ್ರಯೋಜನವನ್ನು ನೀಡಿ ಬಳಕೆದಾರರನ್ನು ಖುಷಿ ಪಡಿಸಿತ್ತು. ಇದೀಗ ರಿಲಯನ್ಸ್ ಜಿಯೋ 7ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಹೀಗಿರುವಾಗ ಕಂಪನಿಯು ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಅಧಿಕೃತ ಸೈಟ್‌ ನಲ್ಲಿ ಈಗಾಗಲೇ ಈ ಪ್ಲಾನ್ ಬಗ್ಗೆ ಪೋಸ್ಟರ್ ಬಿಟ್ಟಿದ್ದು, 299 ರೂ., 749 ರೂ. ಮತ್ತು 2,999 ರೂ. ಗಳ ಯೋಜನೆಯಲ್ಲಿ ಆಫರ್​ ಗಳನ್ನು ನೀಡಲಾಗಿದೆ.

299 ರೂ. ಗಳ ರಿಲಯನ್ಸ್ ಜಿಯೋ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಪ್ರಯೋಜನಗಳು ಮತ್ತು 100 SMS ಜೊತೆಗೆ ದಿನಕ್ಕೆ 2GB ಡೇಟಾವನ್ನು ನೀಡಲಾಗುತ್ತದೆ. ಸದ್ಯ ಜಿಯೋ ವಾರ್ಷಿಕೋತ್ಸವದ ಕೊಡುಗೆಯ ಭಾಗವಾಗಿ ಇದರಲ್ಲಿ 7GB ಹೆಚ್ಚುವರಿ ಡೇಟಾವನ್ನು ಘೋಷಿಸಲಾಗಿದೆ. ಈ ಜಿಯೋ ಪ್ರಿಪೇಯ್ಡ್ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಇನ್ನು 749 ರೂ. ವಿನ ಪ್ಲಾನ್ ದಿನಕ್ಕೆ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಒಳಗೊಂಡಿದೆ. ಇದಲ್ಲದೆ, ಗ್ರಾಹಕರು 14GB ಹೆಚ್ಚುವರಿ ಡೇಟಾವನ್ನು ಸಹ ಪಡೆಯುತ್ತಾರೆ. ಅಲ್ಲದೆ ಬಳಕೆದಾರರು ಈ ವಿಶೇಷ 14GB ಹೆಚ್ಚುವರಿ ಡೇಟಾವನ್ನು 7GB ಡೇಟಾ ಕೂಪನ್‌ ಗಳ ರೂಪದಲ್ಲಿ ಪಡೆಯುತ್ತಾರೆ. ಈ ಜಿಯೋ ಪ್ರಿಪೇಯ್ಡ್ ಯೋಜನೆಯು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

2,999 ರೂ. ಜಿಯೋ ಪ್ರಿಪೇಯ್ಡ್ ಪ್ಯಾಕ್, ಇದು ವಾರ್ಷಿಕ ಯೋಜನೆಯಾಗಿದ್ದು, 2.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ನೀವು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ಪಡೆಯುತ್ತೀರಿ. ವಿಶೇಷವಾಗಿ ಇದು 21GB ಹೆಚ್ಚುವರಿ ಡೇಟಾವನ್ನು ಒಳಗೊಂಡಿವೆ. ಇದನ್ನು 7GB ಡೇಟಾ ಕೂಪನ್‌ ಗಳ ರೂಪದಲ್ಲಿ ಪಡೆಯಬಹುದು.

ಇದರ ಜೊತೆಗೆ ರಿಲಯನ್ಸ್ ಡಿಜಿಟಲ್‌ ನಲ್ಲಿ 10 ಪ್ರತಿಶತ ರಿಯಾಯಿತಿ ಮತ್ತು ಫ್ಲೈಟ್‌ ಗಳಲ್ಲಿ ರೂ. 1,500 ವರೆಗೆ, ಹಾಗೆಯೇ ಹೋಟೆಲ್‌ ಗಳಲ್ಲಿ 15 ಪ್ರತಿಶತದಷ್ಟು ರಿಯಾಯಿತಿ (ಯಾತ್ರಾದೊಂದಿಗೆ ರೂ. 4,000 ವರೆಗೆ) ಪಡೆಯಬಹುದು. ಜನರು AJIO ನಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯನ್ನು ಮತ್ತು Netmeds ನಲ್ಲಿ 20 ಶೇಕಡಾ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಎಲ್ಲಾ ಜಿಯೋ ಪ್ರಿಪೇಯ್ಡ್ ಯೋಜನೆ ಕೊಡುಗೆಗಳು ಈಗಾಗಲೇ ಕಂಪನಿಯ ಅಧಿಕೃತ ವೆಬ್‌ ಸೈಟ್ ಮತ್ತು ಅಪ್ಲಿಕೇಶನ್‌ ನಲ್ಲಿ ಲೈವ್ ಆಗಿವೆ. ಈ ಹೊಸ ಜಿಯೋ ವಾರ್ಷಿಕೋತ್ಸವದ ಕೊಡುಗೆಯು ಸೆಪ್ಟೆಂಬರ್ 30 ರವರೆಗೆ ಮಾತ್ರ ಲಭ್ಯವಿರುತ್ತದೆ.

ಹಿಂದಿನ ಲೇಖನದಸರಾ-2023:  ಗಜಪಡೆಗೆ ತೂಕ ಪರೀಕ್ಷೆ, ಕ್ಯಾಪ್ಟನ್ ಅಭಿಮನ್ಯು ಬಲಶಾಲಿ
ಮುಂದಿನ ಲೇಖನಇಂಗ್ಲೀಷರು ಕರೆದ ಇಂಡಿಯಾ ಹೆಸರಿಗೆ ಮಹತ್ವ ಇಲ್ಲ: ಆರಗ ಜ್ಞಾನೇಂದ್ರ