ಮನೆ ಯೋಗಾಸನ ಏಕಪಾದ ರಾಜಕಪೋತಾಸನ

ಏಕಪಾದ ರಾಜಕಪೋತಾಸನ

0

 ಅಭ್ಯಾಸ ಕ್ರಮ  :

Join Our Whatsapp Group

1. ಮೊದಲು, ಕಾಲುಗಳನ್ನು ಮುಂಗಡೆಗೆ ನೆರವಾಗಿ ಚಾಚಿಟ್ಟು ನೆಲದ ಮೇಲೆ ಕುಳಿತುಕೊಳ್ಳಬೇಕು.

2. ಬಳಿಕ, ಎಡಗಾಲನ್ನು ಮಂಡಿಯಲ್ಲಿ ಭಾಗಿಸಿ ಕಾಲ್ಬೆರಳುಗಳನ್ನು ಹಿಂದಕ್ಕೆ ತುದಿಮಾಡಿರಿಸಿ ಎಡಪೃಷ್ಠವನ್ನು ನೆಲಕ್ಕೆ ಮುಟ್ಟಿಸಬೇಕು ಅಲ್ಲದೆ ಎಡಗಾಲ ಮೀನಖಂಡವು ಎಡತೊಡೆಯ ಹೊರಬದಿಯನ್ನು ಮುಟ್ಟಿರಿಸಿ,ಎಡಬದಿಯನ್ನು ನೆಲದಮೇಲೆ ಊರಿಡಬೇಕು.ಈಗ ಎಡಗಾಲು ‘ವೀರಾಸನ’ದ ಭಂಗಿಯಲ್ಲಿರುವುದಿಲ್ಲ.

3. ಆಮೇಲೆ, ಬರಗಾಲನ್ನು ಹಿಂಗಡೆಗೆ ತಂದು ಅದನ್ನು ಉದ್ದಕ್ಕೂ ನೆಲದಮೇಲೆ ಚಾಚಬೇಕು.

4. ಆನಂತರ ಅಂಗೈಗಳನ್ನು ನೆಲದಮೇಲೂರಿ, ಉಸಿರನ್ನು ಹೊರಹೋಗಿಸಿ, ಬಲಮಂಡಿಯನ್ನು ಭಾಗಿಸಿ ಬಾಲಪಾದವನ್ನು ತಲೆಯ ಬಳಿ ಬರುವಂತೆ ತರಬೇಕು. ಅಲ್ಲದೆ ಬಲಕಣಕಾಲಿನ ಮಂಡಿನಿಂದ ಗಿಣ್ಣಿನವರೆಗಿರುವ ಭಾಗವನ್ನು ನೆಲಕ್ಕೆ ಲಂಬವಾಗಿರಿಸಬೇಕು.ಈ ಸ್ಥಿತಿ ಯನ್ನು ಪಡೆಯಲು ಬಲತೊಡೆಯ ಮಾಂಸ ಖಂಡಗಳನ್ನು ಬಿಗಿಗೊಳಿಸಬೇಕು ಆ ಬಳಿಕ ಕೆಲವು ಸಲ ಉಸಿರಾಟ ನಡೆಸಬೇಕು.

5. ತರುವಾಯ,ಉಸಿರನ್ನು ಹೊರಬಿಟ್ಟು ಬೆನ್ನೆಲುಬು ಮತ್ತು ಕತ್ತನ್ನು ಹಿಗ್ಗಿಸಿ ತಲೆಯನ್ನು ಹಿಂದಕ್ಕೆ ಬೀಸಿ  ಹಿಗ್ಗಿಸಿ, ಕೈಗಳನ್ನು ಒಂದೊಂದಾಗಿ ತಲೆಯ ಮೇಲ್ಗಡೆಗೆ ತಂದು, ಬಲಪಾದವನ್ನು ಬಿಗಿಯಾಗಿ ಹಿಡಿದು, ತಲೆಯನ್ನು ಅದಕ್ಕೆ ಒರಗಿಸಬೇಕು.ಸುಮಾರು ಹದಿನೈದು ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಸಮತೋಲಿಸಿ ಸಾಮಾನ್ಯವಾದ ಉಸಿರಾಟ ನಡೆಸಲು ಯತ್ನಿಸಬೇಕು.

6. ಆಮೇಲೆ ಬಲಗಿನಣ್ಣಿನ ಮೇಲಣ ಬಿಗಿತವನ್ನು ಸಡಿಲಿಸಿ ಕಾಲುಗಳನ್ನು ನೇರವಾಗಿಸಬೇಕು.

7. ಇದಾದಮೇಲೆ, ಇನ್ನೊಂದು ಕಡೆಯೂ ಇದೇ ಭಂಗಿಯನ್ನು ಮಾಡಿ ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು.ಇದರಲ್ಲಿ ಬಲಗಾಲು ವೀರಾಸನದಲ್ಲಿರುತ್ತದೆ. ತಲಯು ಎಡಗಾಲಿನ ಮೇಲೆ ಒರಗಿರುತ್ತದೆ. ಈ ಕಾಲು ತಲೆಯ ಮೇಲ್ಭಾಗಕ್ಕೆ ತಂದ ಎರಡೂ ತೋಳುಗಳ ಬಿಗಿತಕ್ಕೆ ಒಳಗಾಗಿರುತ್ತದೆ.