ಅವಳು : ನಾನು ಈ ಉಡುಗೆಯಲ್ಲಿ 10 ವರ್ಷ ಸಣ್ಣವಳಾಗಿ ಕಾಣುತ್ತೇನೆಂದು ನನ್ನವರು ಹೇಳುತ್ತಾರೆ.
ಇವಳು : ನಿಮ್ಮ ವಯಸ್ಸು ಎಷ್ಟು?
ಅವಳು : 32
ಇವಳು : ನಾನು ಕೇಳಿದ್ದು ಈ ಉಡುಗೆ ಬಿಟ್ಟು!
ಜಗ್ಗು : ಡಾಕ್ಟ್ರೇ, ನನಗೆ ಬಸ್ಸಿನಲ್ಲಿ ಕುಳಿತುಕೊಂಡ ಕೂಡಲೇ ನಿದ್ದೆ ಬಂದು ಬಿಡುತ್ತೆ.!!
ಡಾಕ್ಟರ್ : ಒಳ್ಳೆಯದಲ್ಲವಾ?
ಜಗ್ಗು : ಅರ್ಥಮಾಡಿಕೊಳ್ಳದೇ ಮಾತನಾಡಬೇಡಿ ಡಾಕ್ಟ್ರೇ, ನಾನು ಬಸ್ ಡ್ರೈವರ್!!
ಗಂಡ : ಬೆಳಗಿನ ಜಾವ ಒಂದು ಕನಸು ಕಾಣೆ ನಾನು ನಿನಗೆ ಒಂದು ಜೊತೆ ವಾಲೆ ತಂದು ಕೊಟ್ಟ ಹಾಗೆ.”
ಹೆಂಡತಿ ಆಮೇಲೆ?
ಗಂಡ : ಈಗಾಗಲೇ ವಾಲೆ ಇದೆ ಕಣ್ರಿ.ವಾಪಸ್ ಕೊಟ್ಟುಬಿಡಿ ಅಂತ ನೀನು ಹೇಳೋವವರೆಗೆ ಕನಸು ಕಾಣ್ತಾ ಇದ್ದು. ಅಂಗಡಿಯವನಿಗೆ ಹಿಂದಕ್ಕೆ ಕೊಟ್ಟು ಬಂದೆ.