ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೋಟೆಲಿನವ : ಮೇಡಂ, ನೀವು ಸ್ವಲ್ಪ ರುಚಿರುಚಿಯಾಗಿ ಅಡಿಗೆ ಮಾಡೋದುಕಲಿತುಕೊಳ್ಳಿ.
ಮಹಿಳೆ : ರೀ ಬಾಯಿಮುಚೀ, ನಿಮಗ್ಯಾಕ್ರೀ ತಲೆಹರಟೆ?
ಹೋಟೆಲಿನವ: ನೀವು ಕೆಟ್ಟದಾಗಿ ಅಡಿಗೆ ಮಾಡ್ತೀರ. ನಿಮ್ಮ ಯಜಮಾನರು ನಮ್ಮ ಹೋಟೆಲಿಗೆ ಬಂದು ತಿನ್ತಾರೆ… ಸಾಲ ಹೇಳ್ತಾರೆ ದುಡ್ಡ ಕೊಡಲ್ಲ.

Join Our Whatsapp Group

ಅವನು: ನನ್ ಹೆಂಡ್ತಿದು ದೊಡ್ಡ ರಾಮಾಯಣ ಕಣಯ್ಯ, ಬಹಳಾ ತರ್ಲೆ. ಒದ್ದಾಕಿಬಿಡೋಣ ಅನ್ಸುತ್ತೆ. ಆದ್ರೆ ಧೈರ್ಯ ಸಾಲ್ಟು, ನಿಂಗೆ ಆ ಧೈರ್ಯ ಇದ್ಯಾ?
ಇವನು: ಓ… ನನ್ನ ದಾರಿಗೆ ಅಡ್ಡ ಬಂದ್ರೆ ಅಡ್ಡಡ್ಡ ಕೊಚ್ ಹಾಕಿಬಿಡ್ತೀನಿ. ತಲ್ಲೆ ಮಾಡಿದ್ರೆ ತಲೆ ತೆಗೆದುಬಿಡ್ತೀನಿ. ಜೋರು ಮಾಡಿದ್ರೆ ಜಜ್ ಹಾಕಿಬಿಡ್ತೀನಿ – ಮದುವೆ ಆದ್ದೇಲೆ.

ರಾಜು: ಡಾಕ್ಟೇ, ನಮ್ಮನೇಗೆ ಬೇಗ ಬನ್ನಿ.
ಡಾಕ್ಟರ್: ಯಾರಿಗೆ ಏನು ತೊಂದರೆ?
ರಾಜು: ನಾನು ಏನೋ ಬರೀತಾ ಇದ್ದೆ. ಮತ್ರು ಪೆನ್ನ ಪಕ್ಕದಲ್ಲಿಟ್ಟಿದ್ದೆ ಅದನ್ನ ನನ್ನಗ ತಗೊಂಡು ನುಂಗ್ಲಿಟ್ಟ.
ಡಾಕ್ಟರ್: ಸರಿ, ಈಗ ಬಂದು ಬಿಡ್ತೀನಿ. ಈಗ ನೀವೇನು ಮಾಡ್ತಾ ಇದ್ದೀರಿ?
ರಾಜು: ಮಗು ಪೆನ್ನು ನುಂಗಿಬಿಡ್ತಲ್ಲಾ, ಹಾಗಾಗಿ ಪೆನ್ಸಿಲ್‌ನಲ್ಲೇ ಬರೀತಾ ಇದ್ದೀನಿ.