ಬೆಂಗಳೂರು(Bengaluru): ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ರವರ ಮಾವ ಸತ್ಯ ಉಮ್ಮತ್ತಾಲ್ (71) ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಯೋಗರಾಜ್ ರವರ ಪತ್ನಿಯ ತಂದೆ ಇವರಾಗಿದ್ದು, ಯೋಗರಾಜ್ ಭಟ್ ರವರ ಬೆಂಗಳೂರಿನ ಮನೆಯಲ್ಲಿಯೇ ವಾಸವಾಗಿದ್ದರು. ನಟರೂ ಆಗಿರುವ ಸತ್ಯ ಉಮ್ಮತ್ತಾಲ್ ಅವರು ಸಿನಿಮಾಗಳಲ್ಲಿಯೂ ನಟಿಸಿದ್ದು, ಸುಮಾರು 25 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಲೈಫ್ ಇಷ್ಟೇನೆ, ಕಡ್ಡಿಪುಡಿ, ದನಕಾಯೋನು, ಆಕ್ಟ್ 1978, ಜಯಮ್ಮನ ಮಗ, ಪ್ರಮುಖವಾದವು.
ಸತ್ಯ ಉಮ್ಮತ್ತಾಲ್ ರವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಯೋಗರಾಜ್ ಭಟ್ ಅವರ ಮನೆಯಲ್ಲೇ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಬೆಂಗಳೂರಿನ ರುದ್ರಭೂಮಿಯಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ.