ಸಪ್ಲೆಯರ್: ನೀವು ವೆಜಿಟೇರಿಯನ್ನೋ ನಾನ್ ವೆಜಿಟೇರಿಯನ್ನೋ?
ರಾಜು : ಎರಡೂ ಅಲ್ಲ. ನಾನು ಇಂಡಿಯನ್.
ಸಪ್ಲೆಯರ್: ಹಾಗಲ್ಲ, ನೀವು ಮಾಂಸಾಹಾರಿನೋ? ಸಸ್ಯಾಹಾರಿನೋ?
ರಾಜು : ನಾನು ಎರಡೂ ಅಲ್ಲ, ನಾನು ಭಿಕಾರಿ.
ಕಿಟ್ಟು: ರಾಜು, ನೀನು ಸಿಮೆಂಟ್ ಫ್ಯಾಕ್ಟರಿ ಕಟೀನಿ ಅಂತಿದ್ಯಲ್ಲ ಏನಾಯ್ತು?
ರಾಜು: ಏನ್ಮಾಡೋದು. ಫ್ಯಾಕ್ಟರಿ ಕಟ್ಟೋಕೆ ಸಿಮೆಂಟ್ ಸಿಕ್ತಾ ಇಲ್ಲ.
ಪೋಸ್ಟ್‌ಮ್ಯಾನ್: ಸಾರ್ ನಿಮ್ಮ ಈ ಒಂದು ಪತ್ರಕ್ಕಾಗಿ ನಾಲ್ಕು ಕಿಲೋಮೀಟರ್ ನಡೀಬೇಕಾಯ್ತು.,
ರಾಜು : ಇನ್ನೇಲೆ ಇಲ್ಲಿಗೆ ಬರೋಕೆ ತೊಂದ್ರೆ ತಗೋಬೇಡ. ಅಲ್ಲೇ ನನ್ನ ಹೆಸರಿಗೆ ಪೋಸ್ಟ್ ಮಾಡಿಬಿಡು.