ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬ: ಲೋ ನಾಣಿ ನಂಗೆ ಬೆಂಗಳೂರ್ನನಲ್ಲಿ ಸೈಟ್ ಅಲಾಟಾಗಿದೆ.
ನಾಣಿ: ಹೌದೇ! ಎಲ್ಲಿ?
ಸುಬ್ಬ: ಸ್ಮಶಾಣದಲ್ಲಿ,
ನಾಣಿ: ಅದೇನಿತ್ತಪ್ಪ ನಿಂಗೆ ಅಷ್ಟು ಅರ್ಜೆಂಟು ಸ್ಮಶಾಣದಲ್ಲಿ ಸೈಟ್ ಅಲಾಟ್ ಮಾಡಿಸಿಕೊಳ್ಳೋಕೆ

Join Our Whatsapp Group

ನಾಣಿ: ಸುಬ್ಬ ಒಂದು ವಿಚಾರ ಗೊತ್ತಾಯ್ತಾ?
ಸುಬ್ಬ: ಏನ್‌ ಸಮಾಚಾರ ಹೇಳು.
ನಾಣಿ: ಗುಂಡಂಗೆ ಒಂದು ಗಂಡು ಮಗುವಾಯ್ತು. ಮಗುವಿನ ನಕ್ಷತ್ರ ಹೇಗೆ ಅಂತ ಭವಿಷ್ಯ ಕೇಳಿದರಂತೆ. ಮಗು ಯಾರ ಹೆಸರು ಹಿಡಿದು ಕೂಗುತ್ತೆ ಅವರು ಸಾಯ್ತಾರೆ ಅಂತ ಹೇಳಿದರಂತೆ.
ಸುಬ್ಬ: ಆಮೇಲೆ?
ನಾಣಿ: ಮಗು ಅಜ್ಜಿ ಅಂತ ಕೂಗ್ರಂತೆ ಅಜ್ಜಿ ನೆಗೆದು ಬಿದ್ದಂತೆ, ತಾತಾ ಅಂತ ಕೂಗ್ರಂತೆ ತಾತ ನೆಗೆದು ಬಿದ್ದರಂತೆ, ಅಪ್ಪಾ ಅಂತ ಕೂಗ್ರಂತೆ ಪಕ್ಕದ ಮನೆ ಮಂಜ ನೆಗೆದು ಬಿತೆದ್ನಂತೆ.

ಸುಬ್ಬಿ: ಜ್ಯೋತಿಷಿಗಳೆ, ನನ್ನ ಅದೃಷ್ಟ ಹೇಗಿದೆ?
ಜ್ಯೋತಿಷಿ: ನಿನ್ನ ಅದೃಷ್ಟ ತುಂಬಾ ಚೆನ್ನಾಗಿದೆ. ನಿನ್ನ ಅದೃಷ್ಟ ಹೇಗಿದೆ ಅಂದ್ರೆ, ನೀನು ಸುಬ್ಬನ್ನ ಮದುವೆಯಾದ್ರೆ ನಾಣಿ ಅದೃಷ್ಟವಂತನಾಗ್ತಾನೆ. ನಾಣೀನ ಮದುವೆ ಆದ್ರೆ ಸುಬ್ಬ ಅದೃಷ್ಟವಂತನಾಗ್ತಾನೆ.