ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನರ್ಸ್: ನೋಡಿ ಕಣ್ಣಿಗೆ ಔಷಧಿ ಹಾಕಿದೆ. ಒಂದು ಗಂಟೆ ಕಣ್ಣು ಬಿಡಬಾರದು. ಕಣ್ಣು ಮುಚ್ಚಿ ಕುಳಿತುಕೊಳ್ಳಿ,
ನಾಣಿ: ಹಾಗೆ ಕಣ್ಮುಚ್ಚಿ ಕುಳಿತುಕೊಳ್ಳಲು ಆಗೊಲ್ಲ ಸಿಸ್ಟರ್.
ನರ್ಸ್. ಏಕಾಗೊಲ್ಲಾ?
ನಾಣಿ: ನಾನು ಕಣ್ಮುಚೊಂಡಿರೋದನ್ನು ನೋಡಿ ಯಾರಾದ್ರೂ ನನ್ನ ಪರ್ಸ್ ಹೊಡ್ಕೊಂಡು ಹೋದ್ರೆ?

Join Our Whatsapp Group

ಹುಡುಗಿ: ಅಮ್ಮಾ, ಪೋಲಿ ಹುಡುಗರು ಬರ್ತಾ ಇದ್ದಾರೆ.
ತಾಯಿ: ನೀನು ಒಳಗೆ ಹೋಗು.
ಹುಡುಗಿ: ಅವರೊಂದಿಗೆ ಒಬ್ಬ ಮಠಾಧೀಶ್ವರರೂ ಬರ್ತಾ ಇದ್ದಾರೆ.
ತಾಯಿ: ಹಾಗಾದ್ರೆ ನಿಮ್ಮಜ್ಜಿನ್ನೂ ಒಳಗೆ ಹೋಗೋಕೆ ಹೇಳು.

ನಾಣಿ: (ನಾಣಿಗೆ ಮುಖ ಸುಟ್ಟು ಹೋಗಿತ್ತು ಡಾಕ್ಟರ್ ಹತ್ತಿರ ಹೋಗಿ) ಪ್ಲಾಸ್ಟಿಕ್ ಸರ್ಜರಿ ಮಾಡಿಸೋಕೆ ಎಷ್ಟು ಖರ್ಚು ಬೀಳುತ್ತೇ?
ಡಾಕ್ಟರ್: ಏಳರಿಂದ ಎಂಟು ಲಕ್ಷವಾಗುತ್ತೆ.
ನಾಣಿ: ನಾನೇ ಪ್ಲಾಸ್ಟಿಕ್ ತಂದು ಕೊಟ್ರೆ.