ಮೇಷ್ಟ್ರು: ನೀನೇಕೆ ಶಿಕ್ಷಕನಾಗಲು ಬಯಸುತ್ತೀ?
ಶ್ಯಾಮು: ನಿಮ್ಮ ಹಾಗೆ ಮಕ್ಕಳಿಗೆ ಹೊಡೆದು ನೀವು ನನಗೆ ಹೊಡೆದ ಸೇಡನ್ನು ತೀರಿಸಿಕೊಳ್ಳಲು!
ತಂದೆ: ಮೊಬೈಲ್ ಹಿಡ್ಕೊಂಡು ಏನೋ ಮಾಡ್ತಾ ಇದೀಯ?
ನಾಣಿ: ನನ್ನ ಸ್ನೇಹಿತನಿಗೆ ಮೆಸೇಜು ಕಳುಸ್ತಾ ಇದೀನಿ ಕಣಪ್ಪ.
ತಂದೆ: ನಿನಗೆ ನೆಟ್ಟಗೆ ಬರಿಯೋಕೆ ಬರೊಲ್ಲ.
ನಾಣಿ: ಏನ್ ತೊಂದ್ರೆ ಇಲ್ಲ. ನನ್ನ ಸ್ನೇಹಿತನಿಗೆ ಓದೋಕೆ ಬರೋಲ್ಲ.
“ನಾನು ಎಂಥಾ ಕೈಬರಹವನ್ನಾದರೂ ಓದಬಲ್ಲೆ” ಅಂತ ಸಾಧಿಸಿಕೊಳ್ಳುತ್ತಿದ್ದ ಒಬ್ಬ ಯುವಕನಿಗೆ ಹುಡುಕಿ ಹುಡುಕಿ ಅವನ ಅರ್ಹತೆಗೆ ತಕ್ಕ ಕೆಲಸ ಸಿಕ್ಕೇ ಸಿಕ್ಕಿತು. ಅವನೀಗ ಡಾಕ್ಟರಾಗಿ ಬಹಳ ಓದಿ ಔಷಧಿ ಕಲಕುವ ಕಂಪೌಂಡರ್ ಆಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.”














