ಬೆಂಗಳೂರು: ಲೋಕಸಭೆ ಕ್ಷೇತ್ರ ಮರುವಿಂಗಡನೆ ವಿವಾದದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ಗೆ ಪತ್ರವನ್ನು ಬರೆದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸ್ಟಾಲಿನ್ ಸೂಚನೆಯಂತೆ ತಮಿಳುನಾಡಿನ ಸಚಿವರು ಹಾಗೂ ಸಂಸದರೊಬ್ಬರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಂಸದೀಯ ಕ್ಷೇತ್ರಗಳ ಪ್ರಸ್ತಾವಿತ ವಿಂಗಡಣೆಯ ಪರಿಣಾಮಗಳನ್ನು ಚರ್ಚಿಸಲು ಮಾರ್ಚ್ ೨೨ ರಂದು ಚೆನ್ನೈನಲ್ಲಿ ನಡೆಯಲಿರುವ ಸಮಾನ ಮನಸ್ಕ ರಾಜ್ಯಗಳ ಮೊದಲ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕ್ಷೇತ್ರ ಮರುವಿಂಗಡನೆ ಕುರಿತಾಗಿ ನೀವು ಬರೆದ ಪತ್ರ ಮತ್ತು ಆಹ್ವಾನವನ್ನು ಸ್ವೀಕರಿಸಿದ್ದೇನೆ. ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಕುರಿತು ದಕ್ಷಿಣ ರಾಜ್ಯಗಳ ಕಾಳಜಿ ಅರಿವಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಸಾಧಕ ಬಾದಕಗಳ ಬಗ್ಗೆ ಅರಿವಿದೆ. ಈ ವಿಚಾರವಾಗಿ ಸುಧೀರ್ಘವಾಗಿ ಚರ್ಚಿಸುವ ಅಗತ್ಯವಿದೆ ಎಂದಿದ್ದಾರೆ.
ಸಮಾನ ಮನಸ್ಕ, ಸಂತ್ರಸ್ಥರಾಗುವ ರಾಜ್ಯಗಳು ಚರ್ಚಿಸಬೇಕು. ಈ ಸಭೆಯಲ್ಲಿ ನಾನು ಭಾಗವಹಿಸಬೇಕೆಂಬ ಆಸೆ ಇದೆ ಆದರೆ ಕೆಲವು ಕಾರಣಗಳಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರ ನೀಡಿದ್ದಾರೆ. ಮಾರ್ಚ್ ೨೨ ರಂದು ಕರೆದ ಸಭೆಯಲ್ಲಿ ನನ್ನ ಬದಲಾಗಿ ಡಿ.ಕೆ.ಶಿವಕುಮಾರ್ ಭಾಗವಹಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರ ಮರುವಿಂಗಡನೆ ಸಂಬಂಧಿಸಿದಂತೆ ಮಾರ್ಚ್ ೨೨ ರಂದು ದಕ್ಷಿಣದ ರಾಜ್ಯಗಳ ಸಭೆ ನಡೆಯಲಿದೆ. ಚೆನೈನಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಆಹ್ವಾನ ನೀಡಲು ತಮಿಳುನಾಡಿನ ಸಚಿವ ಮತ್ತು ಸಂಸದರು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದರು.
ಕ್ಷೇತ್ರ ಪುನರ್ ವಿಂಗಡನೆಗೆ ದಕ್ಷಿಣ ಭಾರತದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣದಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.