ಮನೆ ರಾಷ್ಟ್ರೀಯ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ನವನೀತ್‌ ರಾಣಾ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ನವನೀತ್‌ ರಾಣಾ

0

ಮುಂಬೈ(Mumbai): ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಅಮರಾವತಿ ಸಂಸದೆ ನವನೀತ್‌ ರಾಣಾ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿರುವ ಬಂಡಾಯ ಶಾಸಕರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಈ ಕ್ರಮವನ್ನು ಅಮರಾವತಿ ಸಂಸದೆ ನವನೀತ್‌ ರಾಣಾ ಟೀಕಿಸಿದ್ದು, ಉದ್ದವ್ ಠಾಕ್ರೆ ಅವರ ಗೂಂಡಾಗಿರಿ ಕೊನೆಯಾಗಬೇಕು ಎಂದು ಹೇಳಿದ್ದಾರೆ.

ಉದ್ಧವ್‌ ಠಾಕ್ರೆ ಸರ್ಕಾರ ತೊರೆದು, ತಮ್ಮದೇ ನಿರ್ಧಾರ ಕೈಗೊಂಡಿರುವ ಹಾಗೂ ಬಾಳಾ ಸಾಹೇಬರ ಚಿಂತನೆಗಳಿಗೆ ಬದ್ಧವಾಗಿರುವ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಅಮಿತ್‌ ಶಾ ಅವರಲ್ಲಿ ಮನವಿ ಮಾಡಿದ್ದಾರೆ.

ಬಂಡಾಯ ಶಾಸಕ ತಾನಾಜಿ ಸಾವಂತ್‌ ಅವರ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರು ಶನಿವಾರ ದಾಳಿ ಮಾಡಿದ್ದಾರೆ. ಪುಣೆಯ ಕತ್ರಾಜ್‌ ಉಪನಗರದ ಬಾಲಾಜಿ ಪ್ರದೇಶದಲ್ಲಿರುವ ಸಾವಂತ್‌ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಿವಸೇನಾದ ಪುಣೆ ನಗರ ಘಟಕದ ಮುಖ್ಯಸ್ಥ ಸಂಜಯ್‌ ಮೋರೆ, ನಮ್ಮ ಪಕ್ಷದ ಕಾರ್ಯಕರ್ತರು ತಾನಾಜಿ ಸಾವಂತ್‌ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ನಮ್ಮು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ತೊಂದರೆ ನೀಡುತ್ತಿರುವ ಎಲ್ಲಾ ಬಂಡಾಯ ಶಾಸಕರು ಇಂತಹ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಅವರ ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು’ ಎಂದು ಎಚ್ಚರಿಕೆ ನೀಡಿದ್ದಾರೆ.