ತಿರುವನಂತಪುರಂ : ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಅತ್ಮಹತ್ಯೆ ಪ್ರಕರಣಕ್ಕೆ ಈಗ ಕೇರಳ ಪ್ರವೇಶ ಮಾಡಿದೆ. ಸಿ.ಜೆ. ರಾಯ್ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಿಎಂ ಪಿಣರಾಯಿ ವಿಜಯನ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಸಾವು ನಾಗರಿಕ ಸಮಾಜ ಮತ್ತು ವ್ಯಾಪಾರ ಸಮುದಾಯವನ್ನು ಆಘಾತಗೊಳಿಸಿದೆ. ದೇಶದ ತೆರಿಗೆ ಆಡಳಿತದ ಮೇಲೆ ಕಪ್ಪು ಚುಕ್ಕೆ ಎಂದು ಹೇಳಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಎಂದು ವರದಿಗಳು ಹೇಳುತ್ತವೆ. ಇದರಿಂದಾಗಿ ಒಬ್ಬ ಉದ್ಯಮಿಯ ಅಮೂಲ್ಯ ಜೀವನ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಚೇರಿಯಲ್ಲಿ ಐಟಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಯುತ್ತಿರುವಾಗ ರಾಯ್ ಪಿಸ್ತೂಲಿನಿಂದ ಶೂಟ್ ಮಾಡಿ ಆತ್ಮಹತ್ಯೆ ಮಾಡಿದ್ದು ಆಶ್ಚರ್ಯ ತಂದಿದೆ ಎಂದಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ರಾಯ್ ಮತ್ತೊಂದು ಕೋಣೆಗೆ ತೆರಳಿ ತನ್ನ ಪರವಾನಗಿ ಪಡೆದ ಪಿಸ್ತೂಲ್ ಹೊರತೆಗೆದು ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ.
ಮಾಧ್ಯಮಗಳ ಈ ವರದಿ ಸರಿಯಾಗಿದ್ದರೆ ಇದೊಂದು ಇದು ಗಂಭೀರ ಲೋಪ. ಐಟಿ ಅಧಿಕಾರಿಗಳು ಕನಿಷ್ಠ ಅಗತ್ಯದ ಶಿಷ್ಟಾಚಾರವನ್ನು ಪಾಲನೆ ಮಾಡದೇ ಇರುವುದನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ ಮಾನವ ಜೀವ ನಷ್ಟವಾಗಿದೆ” ಎಂದು ವಿಜಯನ್ ಹೇಳಿದ್ದಾರೆ.















