ಮನೆ ಸುದ್ದಿ ಜಾಲ ಹುಬ್ಬಳ್ಳಿ – ಧಾರವಾಡ ಪಾಲಿಕೆ ವಿಭಜನೆ ಫೈಟ್ : ವಿಭಜನೆಯೇ ಲೇಸು ಎಂದ ಕಾಂಗ್ರೆಸ್

ಹುಬ್ಬಳ್ಳಿ – ಧಾರವಾಡ ಪಾಲಿಕೆ ವಿಭಜನೆ ಫೈಟ್ : ವಿಭಜನೆಯೇ ಲೇಸು ಎಂದ ಕಾಂಗ್ರೆಸ್

0

ಹುಬ್ಬಳ್ಳಿ ಶನಿವಾರ (ಮೇ 2) : ಉತ್ತರ ಕರ್ನಾಟಕದ ಪ್ರಮುಖ ಅವಳಿ ನಗರಗಳೆಂದೆ ಹೇಸರಾಗಿರುವ  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಭವಿಷ್ಯದ ಕುರಿತು ರಾಜಕೀಯ ಸಂಘರ್ಷ ತಾರಕಕ್ಕೇರಿದೆ ಎಂದು ಹೇಳಬಹುದು. ಪಾಲಿಕೆ ವಿಭಜನೆಗೆ ಪಟ್ಟು ಹಿಡಿದಿದ್ದ ಬಿಜೆಪಿಯು ಈಗ ಹೆಚ್ಚಿನ ಅನುದಾನದ ಆಸೆಗೆ ಬಿದ್ದು ‘ಬೃಹತ್ ಮಹಾನಗರ ಪಾಲಿಕೆ’ ಮಾಡುವುದಾಗಿ ಬಲವಂತ ಮಾಡುತ್ತಿದೆ ಎನ್ನಬಹುದು. ಆದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ವಿಭಜನೆಯ ನಿರ್ಧಾರಕ್ಕೇ ಅಂಟಿಕೊಂಡಿದೆ ಎನ್ನಲಾಗಿದೆ.

1962ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರ ಸಭೆಗಳನ್ನು ವಿಲೀನಗೊಳಿಸಿ ಮಹಾನಗರ ಪಾಲಿಕೆಯನ್ನು ರಚಿಸಲಾಗಿತ್ತು ಎನ್ನಲಾಗಿದೆ . ಇದು ಪ್ರಸ್ತುತ ಇದು 202.3 ಚದರ ಕಿ.ಮೀ ವ್ಯಾಪ್ತಿ ಹಾಗೂ 82 ವಾರ್ಡ್‌ಗಳನ್ನು ಹೊಂದಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು ಎನ್ನಲಾಗಿದೆ.

ಹೀಗಾಗಿ, ಇದರಿಂದ ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಪ್ರತ್ಯೇಕ ಧಾರವಾಡ ಪಾಲಿಕೆಗೆ ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ 2025ರ ಜನವರಿಯಲ್ಲಿ ವಿಭಜನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು ಎನ್ನಲಾಗಿದೆ.

ಬಿಜೆಪಿ ನಿಲುವು ಬದಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರದ 16ನೇ ಹಣಕಾಸು ಆಯೋಗವು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಾಲಿಕೆಗಳಿಗೆ ವಾರ್ಷಿಕ 500ರಿಂದ 1,000 ಕೋಟಿ ರೂ. ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡಿದೆ. ಒಂದು ವೇಳೆ ಪಾಲಿಕೆ ವಿಭಜನೆಯಾದರೆ ಎರಡೂ ನಗರಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಾಗಲಿದ್ದು, ಈ ಬೃಹತ್ ಅನುದಾನ ಕೈತಪ್ಪಲಿದೆ ಎಂಬುದು ಬಿಜೆಪಿಯ ಆತಂಕ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ವಿಭಜನೆ ಕೈಬಿಟ್ಟು ‘ಬೃಹತ್ ಪಾಲಿಕೆ’ ರಚಿಸಲು ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುವುದಾಗಿದೆ.

ಬಿಜೆಪಿಯ ಈ ನಡೆಯನ್ನು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರವಾಗಿ ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಹೀಗೆ ‘ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಕೇಂದ್ರದ ಮಾನದಂಡಗಳಿಗೆ ನಮ್ಮ ಪಾಲಿಕೆ ಒಳಪಡುವುದು ಅನುಮಾನ. ಹೀಗಾಗಿ ವಿಭಜನೆಯೇ ಸೂಕ್ತ’ ಎಂಬುದು ಅವರ ವಾದ. ಈ ಗೊಂದಲಗಳ ನಡುವೆ ರಾಜ್ಯ ಸರ್ಕಾರ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ ಎನ್ನಬಹುದು.