ಮನೆ ಕಾನೂನು ಮೈಸೂರು ದಕ್ಷಿಣ ವಲಯದ ಐಜಿಪಿ ಮ್ಯಾಥ್ಯೂಸ್ ಥಾಮಸ್ ಸೇರಿದಂತೆ 46 ಡಿವೈಎಸ್ ಪಿ ಗಳ ವರ್ಗಾವಣೆ

ಮೈಸೂರು ದಕ್ಷಿಣ ವಲಯದ ಐಜಿಪಿ ಮ್ಯಾಥ್ಯೂಸ್ ಥಾಮಸ್ ಸೇರಿದಂತೆ 46 ಡಿವೈಎಸ್ ಪಿ ಗಳ ವರ್ಗಾವಣೆ

0

ಬೆಂಗಳೂರು(Bengaluru): ಮೈಸೂರು ದಕ್ಷಿಣ ವಲಯದ ಐಜಿಪಿ ಮ್ಯಾಥ್ಯೂಸ್ ಥಾಮಸ್ ಅವರನ್ನು ಭ್ರಷ್ಟಚಾರ ನಿಗ್ರಹ ದಳ ಮತ್ತು ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಶುರಾಮಪ್ಪ.ಹೆಚ್. ಅವರನ್ನು ಮೈಸೂರು ನಗರದ ಸಂಚಾರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಡಳಿತ ಯಂತ್ರದಲ್ಲಿ ಹೊಸ ಬದಲಾವಣೆ ಮಾಡುವ ಸಲುವಾಗಿ 46 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ.

ಮೈಸೂರು ಗ್ರಾಮಾಂತರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಿತ್.ಎ.ಆರ್.ಅವರನ್ನು ಮೈಸೂರು ದಕ್ಷಿಣ ವಲಯದ ಐಜಿಪಿ ಕಚೇರಿಗೆ, ಮೈಸೂರು ನಗರ ಕೃಷ್ಣರಾಜ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿ ಎಂ.ಎಸ್ ಅವರನ್ನು ಮೈಸೂರು ಜಿಲ್ಲೆ ಗ್ರಾಮಾಂತರ ಉಪ ವಿಭಾಗಕ್ಕೆ ಮತ್ತು ಮೈಸೂರು ನಗರ ಸಂಚಾರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ ಸ್ವಾಮಿ ಎಸ್.ಇ ಅವರನ್ನು ಮೈಸೂರು ನಗರ ಕೃಷ್ಣರಾಜ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದು, ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.