ಮನೆ ರಾಜ್ಯ ಸಮಯ ಬಂದಾಗ ಸಿದ್ದರಾಮಯ್ಯ ಅವರೇ ಹೇಳ್ತಾರೆ – ಡಿಸಿಎಂ ಡಿಕೆಶಿ

ಸಮಯ ಬಂದಾಗ ಸಿದ್ದರಾಮಯ್ಯ ಅವರೇ ಹೇಳ್ತಾರೆ – ಡಿಸಿಎಂ ಡಿಕೆಶಿ

0

ಬೆಂಗಳೂರು : ನಾಯಕತ್ವ ಬದಲಾವಣೆ, ಪವರ್ ಶೇರ್ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೊಸ ಗೂಗ್ಲಿ ಬಿಟ್ಟಿದ್ದಾರೆ. ಸಮಯ ಬಂದಾಗ ಸಿದ್ದರಾಮಯ್ಯ ಅವರೇ ಹೇಳ್ತಾರೆ ಎಂದೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಹಾಕಿ ಹೊಸ ಚದುರಂಗದಾಟ ಶುರು ಮಾಡಿದ್ದಾರೆ.

ನಾಯಿ ಬಾಲ ಅಲ್ಲಾಡಿಸಬಾರದು ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆಗೆ ನಯವಾಗಿಯೇ ತಿರುಗೇಟು ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಮಹದೇವಪ್ಪನಿಗೆ ಉತ್ತರ ಕೊಡೋದಕ್ಕೆ ತಯಾರಿಲ್ಲ. ಯಾರಿಗೂ ಉತ್ತರ ಕೊಡೋದಕ್ಕೂ ತಯಾರಿಲ್ಲ. ನಾನು ಹಿಂದೆ ಹೇಳಿದ್ದೇನೆ. ನಾಯಕತ್ವ ವಿಚಾದದ ಬಗ್ಗೆ ನಾನು, ಸಿದ್ದರಾಮಯ್ಯ ಮಾತಾಡಿದ್ದೇವೆ. ಖರ್ಗೆ ಅವರು ಹೇಳಿದ್ದಾರೆ ಅಂತಾ ಸ್ಪಷ್ಟಪಡಿಸಿದರು.

ನಾನು ಸಿಎಂ ಮತ್ತು ಹೈಕಮಾಂಡ್ ಸೇರಿ ನಾವೆಲ್ಲ ತೆಗೆದುಕೊಂಡಿರೋ ತೀರ್ಮಾನ. ಆ ತೀರ್ಮಾನಕ್ಕೆ ಟೈಮ್ ಬಂದಾಗ ಉತ್ತರ ಸಿಗುತ್ತದೆ. ಇದೇನೂ ಕದ್ದು‌ ಮುಚ್ಚಿ ಇಬ್ಬರದ್ದು ಗುಟ್ಟು ವ್ಯವಹಾರ ಏನೂ ಇಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಟೈಮ್ ಬಂದಾಗ ರಾಜ್ಯದ ಜನತೆಗೆ ಹೇಳ್ತಾರೆ ಎಂದು ತಿರುಗುಬಾಣ ಅಸ್ತ್ರ ಪ್ರಯೋಗಿಸಿದ್ದಾರೆ. ಬೆಳಗ್ಗೆಯಷ್ಟೇ ಆಪ್ತ ಶಾಸಕ ಬಸವರಾಜ ಶಿವಗಂಗಾ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಹೇಳಿಕೆ ಕೊಟ್ಟಿದ್ರು. ಮಧ್ಯಾಹ್ನ ಡಿಕೆಶಿಯಿಂದಲೂ ಅದೇ ದಾಟಿಯ ಹೇಳಿಕೆ ಬಗ್ಗೆ ಚರ್ಚೆ ಆಗ್ತಿದ್ದು, ಸಿದ್ದರಾಮಯ್ಯ ಅಂಗಳಕ್ಕೆ ಚೆಂಡೆಸೆದ ಅಸಲಿಯತ್ತೇನು? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕಾಂಗ್ರೆಸ್‌ನ ಕೆಲ ಶಾಸಕರ ಫಾರಿನ್ ಟೂರ್ ಬಗ್ಗೆ ಪಾಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತೇ ಇಲ್ಲವಂತೆ. ಹೋಗ್ತೀವಿ ಅಂತಾ ಯಾರೂ ಹೇಳಿಯೇ ಇಲ್ಲವಂತೆ. ಕೈ ಶಾಸಕರ ಫಾರಿನ್ ಟೂರ್ ಬಗ್ಗೆ ಡಿಕೆಶಿ ಮಾರ್ಮಿಕ ಪ್ರತಿಕ್ರಿಯಿಸಿದ್ದು, ಯಾವ ಟೂರ್ ಬಗ್ಗೆ ನನಗೆ ಗೊತ್ತಿಲ್ಲ ಅಂದಿದ್ದಾರೆ. ಅವರವರ ವೈಯುಕ್ತಿಕ ವಿಚಾರ ಇದ್ಯೋ ಅಥವಾ ಯಾರಾದರೂ ಕಳಿಸುತ್ತಿದ್ದಾರೋ ಗೊತ್ತಿಲ್ಲ. ಯಾರಾದರೂ ಸ್ಪಾನ್ಸರ್ ಮಾಡ್ತಿದ್ದಾರೋ ಗೊತ್ತಿಲ್ಲ ಅಂತಾ ಪರೋಕ್ಷ ಟಾಂಗ್ ಕೊಟ್ಟರು. ನನಗೇನೂ ಗೊತ್ತಿಲ್ಲ, ಕಳಿಸ್ತಾ ಇರೋರು ಉಂಟು, ಹೋಗುವವರು ಉಂಟು. ನಾನು ಪಕ್ಷದ ಅಧ್ಯಕ್ಷ ನನಗೆ ಗೊತ್ತಿಲ್ಲ. ನಾನು ಇದಕ್ಕೆ ಮಧ್ಯಪ್ರವೇಶ ಮಾಡಲ್ಲ ಅಂತೇಳಿದರು.