ಉತ್ತರ ಕೇಂದ್ರ ರೈಲ್ವೆಯ ನೇಮಕಾತಿ ಮಂಡಳಿಯು ಅಪ್ರೆಂಟಿಸ್ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 1659 ವಿವಿಧ ಟ್ರೇಡ್‌ಗಳ ಆಕ್ಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಪ್ರಯಾಗ್‌ರಾಜ್ ಮೆಕ್ಯಾನಿಕಲ್ ವಿಭಾಗ : 364, ಪ್ರಯಾಗ್‌ರಾಜ್ ಇಲೆಕ್ಟ್ರಿಕಲ್ ವಿಭಾಗ : 339, ಜಾನ್ಸಿ ವಿಭಾಗ : 480,
ವರ್ಕ್‌ಶಾಪ್ ಜಾನ್ಸಿ: 180, ಆಗ್ರ ಡಿವಿಷನ್ : 296 ಹುದ್ದೆಗಳು ಖಾಲಿ ಇವೆ.
ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಫಿಟ್ಟರ್ / ವೆಲ್ಡರ್ / ಮೆಕಾನಿಕ್ / ಕಾರ್ಪೆಂಟರ್ / ಇಲೆಕ್ಟ್ರೀಷಿಯನ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ಶೇ.50 ಅಂಕಗಳು ಮತ್ತು ಐಟಿಐ ವಿದ್ಯಾರ್ಹತೆಯ ಶೇ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಆಗಸ್ಟ್ 1 ಕೊನೆಯ ದಿನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.rrcpryj.org ವೆಬ್ ಸೈಟ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.