ಮನೆ ರಾಷ್ಟ್ರೀಯ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

0

ಮುಂಬೈ(Mumbai):ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಯ್ಕೆ ಚುನಾವಣೆಯಲ್ಲೂ ಶಿವಸೇನೆಯ ರೆಬೆಲ್ ಶಾಸಕರ ಬಣ ಮೇಲುಗೈ ಸಾಧಿಸಿದೆ. ಶಿವಸೇನೆ ರೆಬೆಲ್ ಬಣ ಹಾಗೂ ಬಿಜೆಪಿಯ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
164 ಮತಗಳನ್ನು ಪಡೆದ ನಾರ್ವೇಕರ್ ಅವರು 107 ಮತಗಳನ್ನು ಪಡೆದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅವರನ್ನು ಸೋಲಿಸಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ನಾಳೆಯಿಂದ ಆರಂಭವಾಗಲಿದ್ದು, ಸಿಎಂ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆಗೆ ವೇದಿಕೆ ಸಿದ್ಧವಾದಂತಾಗಿದೆ. ಸದನದ ಎರಡು ದಿನಗಳ ವಿಶೇಷ ಅಧಿವೇಶನ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಯಿತು. ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸಲಿದೆ.