ಮನೆ ರಾಜ್ಯ ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%

ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%

0

ಬೆಂಗಳೂರು : ಗ್ಯಾಸ್ ವಿತರಣೆಗೆ ಕರ್ನಾಟಕ ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ಆದರೆ, ಹೋಟೆಲ್‌ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ.

ನಾಳೆಯಿಂದ ಗ್ಯಾಸ್ ವಿತರಣೆಗೆ ಸರ್ಕಾರ ಸೂಚಿಸಿದೆ. ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಗ್ಯಾಸ್?

  • ಆಸ್ಪತ್ರೆ – 100%
  • ಶಿಕ್ಷಣ ಸಂಸ್ಥೆಗಳಿಗೆ- 100%
  • ಸೀಡ್ ಪ್ರೋಸೆಸಿಂಗ್ – 70%
  • ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
  • ಏರ್ ಲೈನ್ಸ್, ರೈಲ್ವೆ – 70%
  • ಸೀಡ್ ಪ್ರೋಸೆಸಿಂಗ್ – 70%
  • ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
  • ಏರ್‌ಲೈನ್ಸ್, ರೈಲ್ವೆ – 70%
  • ಇಂಡಸ್ಟ್ರೀಯಲ್ ಕ್ಯಾಂಟಿನ್ – 10% ಗ್ಯಾಸ್
  • ಕಾರ್ಪೋರೇಟ್ ಗೆಸ್ಟ್ ಹೌಸ್ – 10%
  • ಫುಡ್ ಪ್ರೋಸೆಸಿಂಗ್ ಕಂಪನಿ – 10%
  • ವದ್ಧಾಶ್ರಮಗಳಿಗೆ – 70%
  • ಹೋಟೆಲ್ – 10%

ಹೋಟೆಲ್‌ಗಳಿಗೆ ಇಂದಿನಿಂದ ಕಮರ್ಷಿಯಲ್ ಗ್ಯಾಸ್ ವಿತರಣೆ ಸರ್ಕಾರ ಸೂಚನೆ ನೀಡಿದೆ. 10% ಅಷ್ಟೇ ಕಮರ್ಷಿಯಲ್ ಗ್ಯಾಸ್ ವಿತರಣೆ ಮಾಡಬೇಕೆಂದು ತಿಳಿಸಿದೆ. ಹೋಟೆಲ್ ಗಳು ಇಂದಿನಿಂದ ಕಮರ್ಷಿಯಲ್ ಗ್ಯಾಸ್ ಬುಕ್ ಮಾಡಬಹುದಾಗಿದೆ.