ಮನೆ ಅಂತಾರಾಷ್ಟ್ರೀಯ ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ..!

ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ..!

0

ಢಾಕಾ : ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್‌ ಆಗಿದ್ದ ಶಿರಿನ್‌ ಶರ್ಮಿನ್‌ ಚೌಧರಿ (ಈಗ ಮಾಜಿ) ಅವರನ್ನ ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ವಿಭಾಗವು (ಡಿಬಿ) ಇಂದು ಬಂಧಿಸಿದೆ. ಢಾಕಾದ ಧನ್ಮಂಡಿಯ 8/ಎ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಶಿರಿನ್ ಅವರನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿ ಚಳವಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವೊಂದರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪತ್ತೇದಾರಿ ವಿಭಾಗದ ಹೆಚ್ಚುವರಿ ಕಮಿಷನರ್ ಮೊಹಮ್ಮದ್ ಶಫೀಕುಲ್ ಇಸ್ಲಾಂ ಖಚಿತಪಡಿಸಿದ್ದಾರೆ. ಶಿರಿನ್ ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕ‌ರ್ ಆಗಿ 2013 ರಿಂದ 2024ರ ಆಗಸ್ಟ್‌ವರೆಗೆ ಕಾರ್ಯ ನಿರ್ವಹಿಸಿದ್ದರು.

2025ರ ಆಗಸ್ಟ್ 5ರಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಗೊಂಡ 27 ದಿನಗಳ ನಂತರ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಅವರ ದೀರ್ಘಕಾಲದ ಸಂಸದೀಯ ಪಯಣ ಅಂತ್ಯಗೊಂಡಿತ್ತು.