ಬೆಂಗಳೂರು : 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಬಿಜೆಪಿ ನಾಯಕ ಸಿಟಿ ರವಿ ಭವಿಷ್ಯ ನುಡಿದಿದ್ದಾರೆ. 2028ಕ್ಕೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂಬ ಸಚಿವ ಜಮೀರ್, ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಕಾಂಗ್ರೆಸ್‌ಗೆ ಬಹುಮತ ಇದೆ. ನಾವ್ಯಾರು ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯಲಿ ಅಂತ ಆಗ್ರಹ ಮಾಡುತ್ತಿಲ್ಲ ಎಂದರು.
ನಮಗೂ ಸಿದ್ದರಾಮಯ್ಯಗೂ ಯಾವ ಒಪ್ಪಂದವೂ ಆಗಿಲ್ಲ. ಕಾಂಗ್ರೆಸ್‌ನವರು ಮತ್ತು ಡಿಕೆಶಿ ಅವರು ಒಪ್ಪಂದ ಆಗಿದೆ, ಆಗಿಲ್ಲ ಅಂತ ಹೇಳುತ್ತಿದ್ದಾರೆ. 2028ರವರೆಗೂ ಜನ ನಿಮಗೆ ಬಹುಮತ ಕೊಟ್ಟಿದ್ದಾರೆ. ಜನ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟಿದ್ದಾರೆ. 2028ರ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸೋಲುತ್ತೆ. ಇನ್ನೂ ಯಾವ ಪಾರ್ಟಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಬಿಟ್ಟು ಸಿದ್ದರಾಮಯ್ಯ ಸಿಎಂ ಆಗಬೇಕಾದ್ರೆ ಅದನ್ನ ಜನ ತೀರ್ಮಾನ ಮಾಡ್ತಾರೆ. ಜನ ಕಾಂಗ್ರೆಸ್ ಅನ್ನ ಗೆಲ್ಲಿಸಲ್ಲ. ಬರೆದಿಟ್ಟುಕೊಳ್ಳಿ 2028ಕ್ಕೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ ಸೋಲು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಕೆಟ್ಟ ಆಡಳಿತದಿಂದಾಗಿ ಕಾಂಗ್ರೆಸ್ ಸೋಲಿಸಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ.
ಉಪಚುನಾವಣೆಯಲ್ಲೇ ಪಲ್ಟಿ ಹೊಡೆಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಶಿರ್ಷಾಸನ ಮಾಡ್ತಾ ಇದ್ದಾರೆ. ಉಪಚುನಾವಣೆಯಲ್ಲಿ ಹೀಗೆ ಮಾಡ್ತಾ ಇರೋರು ಜನರಲ್ ಎಲೆಕ್ಷನ್‌ನಲ್ಲಿ ಗೆಲ್ತಾರಾ? ಬೈ ಎಲೆಕ್ಷನ್‌ನಲ್ಲೂ ಸೋಲ್ತಾರೆ, ಜನರಲ್ ಎಲೆಕ್ಷನ್‌ನಲ್ಲಿಯೂ ಸೋಲ್ತಾರೆ ಎಂದಿದ್ದಾರೆ.














