ಭೋಪಾಲ್ : ಪ್ರಿಯಕರನ ಜೊತೆ ಸೇರಿ ಮಹಿಳೆ ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಏ.7ರ ತಡರಾತ್ರಿ ಕೊಲೆ ನಡೆದಿದೆ. 28 ವಯಸ್ಸಿನ ಪುರೋಹಿತ್ ದೇವಕೃಷ್ಣ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಅವರ ದೇಹದ ಮೇಲೆ ಹರಿತವಾದ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿರುವ ಗುರುತುಗಳು ಪತ್ತೆಯಾಗಿವೆ.
ದರೋಡೆಕೋರರು ಮನೆಗೆ ನುಗ್ಗಿ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಅದನ್ನು ತಡೆಯಲು ಮುಂದಾದ ನನ್ನ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದರು ಎಂದು ಪತ್ನಿ ದೂರು ನೀಡಿದ್ದರು. ದೇವಕೃಷ್ಣ ಅವರ ದಾಂಪತ್ಯ ಬಹಳ ದಿನಗಳಿಂದ ಸಮಸ್ಯೆಗಳಿಂದ ಕೂಡಿತ್ತು. ಪ್ರಿಯಾಂಕಾ ಆಗಾಗ್ಗೆ ನಮ್ಮ ಅಣ್ಣನನ್ನು ಅವಮಾನಿಸುತ್ತಿದ್ದರು. ‘ನೀವು ಕಪ್ಪು ಚರ್ಮದವರು… ನೀವು ನನಗೆ ಅರ್ಹರಲ್ಲ… ನಾನು ನಿಮಗಿಂತ ಉತ್ತಮ ವ್ಯಕ್ತಿಯನ್ನು ಪಡೆಯಲು ಅರ್ಹಳು’ ಎಂದು ಪತಿಯನ್ನು ಹೀಯಾಳಿಸುತ್ತಿಳು.
ಕಮಲೇಶ್ ತನ್ನ ಸಹಚರ ಸುರೇಂದ್ರ ಭಾಟಿಯನ್ನು ಸಂಪರ್ಕಿಸಿ, ದೇವಕೃಷ್ಣನನ್ನು ಕೊಲ್ಲಲು 1 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 50,000 ರೂ. ನೀಡಿದ್ದ. ಕೊಲೆಯಾದ ರಾತ್ರಿ ಮನೆಯ ಬಾಗಿಲನ್ನು ಉದ್ದೇಶಪೂರ್ವಕವಾಗಿ ಬೀಗ ಹಾಕದೆ ಬಿಡಲಾಗಿತ್ತು. ಸುರೇಂದ್ರ ಒಳಗೆ ಬಂದು ಮಲಗಿದ್ದ ದೇವಕೃಷ್ಣ ಮೇಲೆ ಹಲ್ಲೆ ಮಾಡಿದ್ದ.
ಅಪರಾಧವನ್ನು ದರೋಡೆಯಂತೆ ಬಿಂಬಿಸಲು, ಕೊಠಡಿಯನ್ನು ದೋಚಿದರು. ಬೆಲೆಬಾಳುವ ವಸ್ತುಗಳನ್ನು ಕಾಣೆಯಾಗಿದೆ ಎಂದು ಕಥೆ ಕಟ್ಟಿದರು. ಮನೆಯಲ್ಲಿ ಶೋಧ ನಡೆಸಿದಾಗ ಅವಳು ಕದ್ದಿದ್ದಾಗಿ ಹೇಳಿಕೊಂಡಿದ್ದ ಆಭರಣಗಳು ಪತ್ತೆಯಾಗಿವೆ. ಪ್ರಿಯಾಂಕಾ ಮತ್ತು ಕಮಲೇಶ್ ಪುರೋಹಿತ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆದರೆ, ಆಪಾದಿತ ಸುಪಾರಿ ಹಂತಕ ಸುರೇಂದ್ರ ಭಾಟಿ ತಲೆಮರೆಸಿಕೊಂಡಿದ್ದಾನೆ.















