ಮನೆ ರಾಜ್ಯ ಯುಪಿಯಲ್ಲಿ ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ..!

ಯುಪಿಯಲ್ಲಿ ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ..!

0

ಲಕ್ನೋ : ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಿರಿಯ ವಕೀಲ ರಾಜೀವ್‌ ಸಿಂಗ್‌ (45) ಹತ್ಯೆಗೀಡಾದ ವ್ಯಕ್ತಿ. ಶೂಟೌಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡಿನ ದಾಳಿ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ರಾಜೀವ್‌ ಸಿಂಗ್‌ ಎಂದಿನಂತೆ ಬೆಳಗ್ಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ವಕೀಲನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ವಕೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಮಾಡಿ ಆರೋಪಿಗಳು ಬೈಕ್‌ನಲ್ಲಿ ಎಸ್ಕೇಪ್‌ ಆಗಲು ಮುಂದಾಗಿ ಪೇಚಿಗೆ ಸಿಲುಕಿದ ಪ್ರಸಂಗವೂ ನಡೆಯಿತು. ಬೈಕ್‌ ಕಿಕ್‌ ಸ್ಟಾರ್ಟ್‌ ಮಾಡುವಾಗ ತಕ್ಷಣಕ್ಕೆ ಸ್ಟಾರ್ಟ್‌ ಆಗಿಲ್ಲ. ಇದರಿಂದ ಕೆಲಕಾಲ ಆರೋಪಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಬೈಕ್‌ ಪೆಡಲ್‌ ಅನ್ನು ನಿರಂತರವಾಗಿ ತುಳಿದರೂ ಬೈಕ್‌ ಸ್ಟಾರ್ಟ್‌ ಆಗಲಿಲ್ಲ. ಆಗ ದಾಳಿಕೋರರನ್ನು ಹಿಡಿದು ಕೆಲವರು ಓಡಿ ಬಂದರು. ಅಷ್ಟೊತ್ತಿಗೆ ಬೈಕ್‌ ಸ್ಟಾರ್ಟ್‌ ಆಗಿ ಆರೋಪಿಗಳು ಎಸ್ಕೇಪ್‌ ಆದರು.

ಸಿಂಗ್ ಈ ಹಿಂದೆ ಅರ್ಜಿ ಸಲ್ಲಿಸಿ, ತನ್ನ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಗ್ರಾಮದ ಮಾಜಿ ಅಧ್ಯಕ್ಷ ಹಾಗೂ ವಕೀಲರ ಮೇಲೆ ಈ ಹಿಂದೆ ಎರಡು ಬಾರಿ ಹಲ್ಲೆ ನಡೆದಿತ್ತು.