ಮನೆ ರಾಜ್ಯ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನಕ್ಕೆ ಸಿಎಂ ಚಾಲನೆ..!

40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನಕ್ಕೆ ಸಿಎಂ ಚಾಲನೆ..!

0

ಬೀದರ್ : ಜಿಲ್ಲೆಯಲ್ಲಿರುವ ನಡೆಯುತ್ತಿರುವ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದು (ಏ.11) ಚಾಲನೆ ನೀಡಿದರು. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬೀದರ್ ಏರ್‌ಬೇಸ್‌ಗೆ ಆಗಮಿಸಿದರು.

ಬಳಿಕ ಸಮ್ಮೇಳನ ನಡೆಯುವ ಬೀದರ್‌ನ ಝೀರಾ ಕನ್ವನ್ಷನ್ ಹಾಲ್‌ಗೆ ಬಂದು ಛಾಯಾ ಚಿತ್ರ ಪ್ರದರ್ಶನ ಉದ್ಘಾಟನೆ ಮಾಡಿದರು. ಬಳಿಲ ದೀಪ ಬೆಳಗಿಸುವ ಮೂಲಕ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಬೀದರ್‌ನಲ್ಲಿ 19 ವರ್ಷಗಳ ಬಳಿಕ ಪತ್ರಕರ್ತರ ಸಮ್ಮೇಳನ ನಡೆಯುತ್ತಿದ್ದು, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಬಸವಲಿಂಗ ಪಟ್ಟದ್ದೆವರು ಸೇರಿದಂತೆ ಸ್ವಾಮಿಗಳು ಭಾಗಿಯಾಗಿದ್ದರು. ಇದೇ ವೇಳೆ ಸಿಎಂ ಶರಣ ಸೂಪಿ ಸಿರಿ ಸ್ವರ್ಣ ಸಂಚಿಕೆ ಬಿಡುಗಡೆ ಮಾಡಿದರು.

ರಾಜ್ಯದ ಸಾವಿರಾರು ಪತ್ರಕರ್ತರು ಸಮ್ಮೇಳನದಲ್ಲಿ ಭಾಗಿಯಾಗಿದ್ದು, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಸಚಿವ ರಹೀಂಖಾನ್, ಸಚಿವ ಶರಣ ಪ್ರಕಾರ ಪಾಟೀಲ್, ಸಂಸದ ಸಾಗರ್ ಖಂಡ್ರೆ ಸೇರಿ ಹಲವರು ಸಾಥ್ ನೀಡಿದರು. ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಶರಣರ ನಾಡು ಅಣಿಯಾಗಿದ್ದು, ಇಂದು (ಏ.11) ಮತ್ತು ನಾಳೆ (ಏ.12) ಎರಡು ದಿನ ನಡೆಯಲಿದೆ.

ಸಮ್ಮೇಳನದ ಉದ್ಘಾಟನೆಗೂ ಮುನ್ನ ಬೀದರ್ ನಗರದಲ್ಲಿ ಬೃಹತ್ ಮೆರವಣಿಗೆಗೆ ಸಚಿವ ರಹೀಂಖಾನ್ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಝೀರಾ ಕನ್ವೆನ್ಶನ್ ಹಾಲ್‌ವರೆಗೆ 40ನೇ ಸಮ್ಮೇಳನದ ಸವಿನೆನಪಿಗಾಗಿ 40 ಬೃಹತ್ ಕೊಡೆಗಳ ಭವ್ಯ ಮೆರವಣಿಗೆ ನಡೆಯಿತು.

ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದ ಬಳಿಕ ಗಾಂಧಿ-ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮ ಗೋಷ್ಠಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ಗೋಷ್ಠಿ ನಡೆಯಲಿದೆ. ಸಂಜೆ 5ಕ್ಕೆ ಗಡಿ ಸಮಸ್ಯೆಗಳು ಸಂವಾದ, ಸಂಜೆ 5.30ಕ್ಕೆ ಮಾಧ್ಯಮ ಮತ್ತು ಉದ್ಯಮ ಉಪನ್ಯಾಸ ನಡೆಯಲಿದೆ.

ಉದ್ಘಾಟನೆ ಬಳಿಕ ಸಿಎಂ ಬೀದರ್ ಏರಬೇಸ್‌ನಿಂದ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿಗೆ ಪ್ರಯಾಣ ಬೆಳೆಸಿ, ಅಲ್ಲಿ ಚಿತ್ತಾಪುರ ತಾಲೂಕಿನ ಸೂಗೂರು ಗ್ರಾಮದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿಲಿದ್ದಾರೆ.