ಮನೆ ಸುದ್ದಿ ಜಾಲ ಕೊಪ್ಪಳದಲ್ಲಿ ಲವ್ ಜಿಹಾದ್ – ಯುವಕನ ಫೋನಲ್ಲಿ ಫೋಟೋ, ವಿಡಿಯೋ ಪತ್ತೆ..!

ಕೊಪ್ಪಳದಲ್ಲಿ ಲವ್ ಜಿಹಾದ್ – ಯುವಕನ ಫೋನಲ್ಲಿ ಫೋಟೋ, ವಿಡಿಯೋ ಪತ್ತೆ..!

0

ಕೊಪ್ಪಳ : ಹುಬ್ಬಳ್ಳಿ ಬಳಿಕ ಇದೀಗ ಕೊಪ್ಪಳದಲ್ಲೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ರಾಶಿ ರಾಶಿ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿವೆ.

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಹಲವೆಡೆ ಸುತ್ತಾಡಿದ್ದಾನೆ. ಸದ್ಯ ಇದೇ ವಿದ್ಯಾರ್ಥಿನಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಎನ್ನಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇವರಿಬ್ಬರು ಜಿಲ್ಲಾಸ್ಪತ್ರೆ ಬಳಿ ಇದ್ದಾಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮುಸ್ತಫಾ ಮೊಬೈಲ್ ಪರಿಶೀಲಿಸಿದಾಗ ಹತ್ತಾರು ಹಿಂದೂ ಯುವತಿಯರ ಜೊತೆಗೆ ಇರುವ ರಾಶಿ ರಾಶಿ ವಿಡಿಯೋಗಳು ಪತ್ತೆಯಾಗಿವೆ.

ಇವುಗಳಲ್ಲಿ ಹಿಂದೂ ಯುವತಿಯರಿಗೆ ಬೀಯರ್ ಕುಡಿಸಿ, ಮಾಂಸ ಸೇವನೆ ಮಾಡಿಸಿದ್ದು, ಅರೆನಗ್ನಾವಸ್ಥೆಯಲ್ಲಿ ಇರುವ ವಿಡಿಯೋಗಳು ಪತ್ತೆಯಾಗಿವೆ. ಜೊತೆಗೆ ಗಾಂಜಾ, ಹುಕ್ಕಾ ಸಹ ಹೊಡೆಯುವ ವಿಡಿಯೋಗಳು ಸಹ ಪತ್ತೆಯಾಗಿವೆ.

ಮುಸ್ತಫಾ ಮಟ್ಕಾ ಬುಕ್ಕಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು, ಕಾರ್ಯಕರ್ತರು ಎಸ್ಪಿ ಡಾ.ರಾಮ್ ಅರಸಿದ್ದಿಯವರನ್ನು ಭೇಟಿಯಾಗಿ ಮುಸ್ತಾಫಾ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಪ್ರಕರಣದ ತನಿಖೆ ನಡೆಸಿ, ಮುಸ್ತಫಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.