ಉಡುಪಿ : ಬ್ರಹ್ಮಾವರ ತಾಲೂಕಿನಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇಲ್ಲಿನ ನಡೂರು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ಸ್ಥಳೀಯ ನಿವಾಸಿ ಬಾಬು ಶೆಟ್ಟಿ ಎಂಬವರ ಮನೆಗೆ ಪದೇಪದೇ ಚಿರತೆ ಬರುತ್ತಿದೆ. ಇವರು ಸಾಕಿದ ಕೋಳಿಗಳನ್ನು ಹೊತ್ತೊಯ್ದಿರುವುದು ಮಾತ್ರವಲ್ಲದೆ ದನಗಳಿಗೂ ಪರಚಿ ಗಾಯ ಮಾಡಿದೆ.
ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಇದೇ ರೀತಿ ಚಿರತೆ ಈ ಪ್ರದೇಶದಲ್ಲಿ ಅನೇಕ ಬಾರಿ ನಡೆಸಿಕೊಂಡಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.














