ಮನೆ ರಾಜ್ಯ ನಾಪತ್ತೆಯಾಗಿದ್ದ, ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ರು..!

ನಾಪತ್ತೆಯಾಗಿದ್ದ, ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ರು..!

0

8 ವರ್ಷಗಳ ಹಿಂದೆ ದಿಢೀರ್‌ ನಾಪತ್ತೆಯಾಗಿದ್ದ ನಟ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷವಾಗಿದ್ದಾರೆ. ಜೀವನದಲ್ಲಿ ಏನೇನಾಯ್ತು, ನಾಪತ್ತೆಯಾಗಿದ್ದೇಕೆ, ಬಳಿಕ ನಡೆದ ಸಂಗತಿಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ ಸಂಕನಗೌಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಹೆದರಿದ್ದೇನೆ, ಕಂಫರ್ಟ್‌ ಝೋನ್‌ ಕೊಡಿ ಪ್ಲೀಸ್‌’ ಅಂತ ಮಲ್ಲಿ ಭಾವುಕರಾಗಿ ಬೇಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಲ್ಲಿ ಹೇಳಿದ್ದೇನು? – ಖುಷಿ ಇದೆ, ಬೇಜಾರೂ ಇದೆ. ಈಗ ಬಂದಿದ್ದಕ್ಕೆ ಖುಷಿ ಇದೆ, ಮಿಸ್ ಮಾಡ್ಕೊಂಡಿದ್ದಕ್ಕೆ ಬೇಜಾರಿದೆ. ಕ್ಷಮೆಯಿರಲಿ.. ಸುದ್ದಿಗೋಷ್ಠಿಗೂ ನನ್ನ ಬಳಿ ದುಡ್ಡಿರಲಿಲ್ಲ. ನನ್ನಿಂದ ಎಷ್ಟೋ ಜನರಿಗೆ ತೊಂದರೆ ಆಗಿರಬಹುದು, ಅದಕ್ಕೆ ನೋವಾಗಿದೆ. ಕ್ಷಮೆ ಕೇಳ್ತೀನಿ, ಪರಿಸ್ಥಿತಿ ನನ್ನನ್ನು ಹಾಗೆ ಮಾಡಿತ್ತು. ವಿಧಿ ನನ್ನ ಜೊತೆ ಏನೇನೋ ಆಟ ಆಡಿತು ಎಂದು ಮಲ್ಲಿ ದುಃಖ ತೋಡಿಕೊಂಡಿದ್ದಾರೆ.

ನಾನು ಮಲ್ಲಿಕಾರ್ಜುನ ಸಂಕನಗೌಡ, ಗದಗದವನು. ಈಗಿನವರಿಗೆ ನನ್ನ ಪರಿಚಯ ಇರಲ್ಲ, ಅದಕ್ಕೆ ಹೇಳ್ತಿದ್ದೀನಿ. ದರ್ಶನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದೀನಿ, ನಿರ್ದೇಶಕನಾಗಿಯೂ ಇದ್ದೆ. ಮೊದಲ ಸಲ ಮಾಡಿದಾಗಲೇ ಲಾಸ್ ಆಯ್ತು. ಸಾಲ, ಬಡ್ಡಿ, ಚಕ್ರಬಡ್ಡಿ ಡಿಸ್ಟ್ರುಬ್ಯುಷನ್ ಹೀಗೆ ಎಲ್ಲಾ ಲಾಸ್ ಆಗ್ತಾನೇ ಬಂತು. 2018ರ ಜುಲೈ 1 ರಂದು ಬೆಂಗಳೂರು ಬಿಟ್ಟೆ, ಬೆಂಗಳೂರು ಬಿಡೋವಾಗ ದುಡ್ಡಿರಲಿಲ್ಲ. 15 ಸಾವಿರ ಇತ್ತು, ಅದೊಂದು ಬಡ್ಡಿ ಕಟ್ಟೋಕೆ ಇಟ್ಕೊಂಡಿದ್ದೆ. ಈ ಹಿಂದೆ ಹೋಟೆಲ್ ಮಾಡಿದೆ, ಮೈನಿಂಗ್‌ಗೆ ದುಡ್ಡು ಹಾಕಿದೆ. ಯಾವುದೂ ಸರಿಯಾಗಿ ಕೈ ಹಿಡಿಯಲಿಲ್ಲ.

ದರ್ಶನ್ ಸರ್, ದಿನಕರ್ ಫ್ಯಾಮಿಲಿ ಥರ ನೋಡ್ಕೊಂಡಿದ್ದಾರೆ. ಅವರು ಸ್ವಂತ ಅಣ್ಣನ ಥರ. 2018ರಲ್ಲಿ ಸಾಲ ಮಾಡ್ಕೊಂಡಿದ್ದೆ. ನನ್ನ ಹೆಂಡತಿಗೆ ವಿಷ್ಯಾನೇ ಗೊತ್ತಿರಲಿಲ್ಲ. 8 ಕೋಟಿಗೂ ಹೆಚ್ಚು ಸಾಲ ಮಾಡಿದ್ದೆ. ನನ್ನ ಹೆಂಡತಿ ಹೇಳಿದ್ಲು ಸಾಯೋಣ ಅಂತ. ಮೂರು ದಿನ ಕೂತ್ಕೊಂಡು ಕಣ್ಣೀರು ಹಾಕಿದ್ವಿ. ಎಲ್‌ಕೆಜಿ ಓದೋ‌ ಮಗಳು, ಮಗ ಇದ್ರು. ನಾವು ಮೂರು ದಿನಗಳಲ್ಲಿ ಸಾಯೋ ಪ್ಲ್ಯಾನ್ ಮಾಡಿದ್ವಿ.‌ 6 ದಿನದಲ್ಲಿ ಮದುವೆಗೆ ಬನ್ನಿ ಅಂತ ಹೆಂಡತಿ ಮಾವ ಕಾಲ್ ಮಾಡಿದ್ರು. ಬನ್ನಿ ಅಂದರು, ಮದುವೆಗೆ ಹೋದ್ವಿ. ಬರಿಗೈಯಲ್ಲೇ ಹೋದೆ.

ಮದುವೆಯಲ್ಲೂ ಉತ್ಸಾಹ ಇರಲಿಲ್ಲ. 6 ದಿನ ಮ್ಯಾನೇಜ್ ಮಾಡಿದೆ. ಈ ಗ್ಯಾಪಲ್ಲಿ ಯಾರಿಗೋ ಗೊತ್ತಾಗುತ್ತೆ. ನಂಗೂ ಸಾಯೋಕೆ ಇಷ್ಟ ಇರಲಿಲ್ಲ. ನನ್ನ ಹೆಂಡತಿ ಸಾಯೋಣ ಅಂತಿದ್ಲು. ನಮ್ಮ ಸಂಬಂಧಿಕರು ಒಬ್ರು ಪ್ರಮಾಣ ಮಾಡಿಸ್ಕೊಂಡ್ರು. 2018 ಜುಲೈ 7 ಊರು ಬಿಟ್ಟೆ. ಹೆಂಡತಿಗೆ ಹೇಳಿ ಹೊರಟೆ. ಹೋಗೋಕೂ ಮುನ್ನ ಎಲ್ಲರಿಗೂ ಮೆಸೇಜ್ ಹಾಕಿದೆ. ಮೊಬೈಲ್ ಆಫ್ ಮಾಡಿಬಿಟ್ಟೆ. ಸಿಮ್ ಎಸೆದುಬಿಟ್ಟೆ, ಕುಂದಾಪುರದ ಹತ್ರ‌ ನದಿ. ಸವದತ್ತಿ ಯಲ್ಲಮ್ಮನ ಹತ್ರ ಹೋದೆ, ಹೀಗೆ. ಐದತ್ತು ಸಾವಿರ ಇತ್ತು, ಫ್ರೆಂಡ್ ಹತ್ರ ತಗೊಂಡೆ.

ಒಂದು ಕಡೆ ನೆಲೆ ನಿಲ್ಲದೆ ಎಲ್ಲೆಲ್ಲೋ ಸುತ್ತಿದೆ. ನಾನಿದ್ದೀನಿ… ನನ್ನ ಹುಡುಕೋ ಪ್ರಯತ್ನ ಮಾಡಬೇಡಿ ಅಂತ ಹೆಂಡತಿಗೂ, ಅಪ್ಪ ಅಮ್ಮಗೂ ಲೆಟರ್ ಬರೆದೆ. 7 ವರ್ಷ ಸಾಡೇ ಸಾಥ್ ಇತ್ತು. ನೇಪಾಳಕ್ಕೆ ಹೋಗಿದ್ದೆ, ಅಲ್ಲೇ ಎಷ್ಟೋ ದಿನ ಕಳೆದೆ. ನಾನಿದ್ದೀನಿ ಅನ್ನೋ ಕ್ಲೂ ಕೊಡ್ತಿದ್ದೆ. ಆಮೇಲೆ ಗಿಲ್ಟ್ ಕಾಡ್ತಿತ್ತು. ಕಷ್ಟ ಹೇಳ್ಕೊಂಡು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಬೇಕು ಅಂತ ಬಂದೆ. ಮತ್ತೆ ಬರಬೇಕು ಅನ್ನಿಸ್ತು. ಒಂದೂವರೆ ವರ್ಷದ ಹಿಂದೆ ಬಂದೆ. ಅದೇ ಟೈಮಲ್ಲಿ ದರ್ಶನ್ ಸರ್‌ದು ಇಷ್ಯೂ ನಡೀತಿತ್ತು. ನಾನಿದ್ದೀನಿ ಅಂತ ಹೇಳಬೇಕು ಅಂತ ಅನ್ಕೊಂಡೆ. ಅರ್ಜುನ್ ಸರ್ಜಾ ಕೇಸ್ ಇತ್ತು.

ಚೆಕ್ ಬೌನ್ಸ್ ಆಗಿತ್ತು. ಬೇಲ್ ತಗೊಳ್ಳಬೇಕಿತ್ತು. ಹೋದ ವರ್ಷ ಬೇಲ್ ತಗೊಂಡಿದ್ದು. ದಿನಕರ್ ಭೇಟಿಯಾದೆ, ದರ್ಶನ್ ಸರ್ ಊರಲ್ಲಿ ಇರಲಿಲ್ಲ. ಮೀಟ್ ಆಗೋಕೆ ಆಗಲಿಲ್ಲ. ದುಡೀಬೇಕು ಅಂತ ಬಂದೆ. ಮೂರು ದಿನಕ್ಕೆ ಸ್ಕ್ರೋಕ್ ಆಯ್ತು. ನಾನು ಯಾರ್ ಹತ್ರ ದುಡ್ಡು ತಗೊಂಡಿದ್ದೀನೋ, ಎಲ್ಲರ ಮನೆಗೂ ಹೋಗಿದ್ದೆ. ನನಗೆ ಅವಕಾಶ ಕೊಡಿ.. ಸೋತಿದ್ದೀನಿ, ಸತ್ತಿಲ್ಲ ಅಂದೆ. ಎಲ್ಲರೂ ಒಳ್ಳೆಯದಾಗುತ್ತೆ ಅಂತ ಕಳಿಸ್ಕೊಟ್ರು. ಪ್ರೆಸ್‌ಮೀಟ್ ಮಾಡ್ಬೇಕು ಅನ್ಕೊಂಡು ಬಂದೆ ಎಂದು ನಡೆದ ಸಂಗತಿಯನ್ನು ಮಲ್ಲಿಕಾರ್ಜುನ ಎಳೆಎಳೆಯಾಗಿ ಬಿಚ್ಚಿಟ್ಟರು.