ಮನೆ ಸುದ್ದಿ ಜಾಲ ತೆಲುಗಿನಲ್ಲಿ ಸೈಲೇಂಟ್‌ ಆಗಿ ರಿಲೀಸ್ ಆಗೋಕೆ ರೆಡಿ : ರಿಷಬ್ ಶೆಟ್ಟಿ ಸಿನಿಮಾ

ತೆಲುಗಿನಲ್ಲಿ ಸೈಲೇಂಟ್‌ ಆಗಿ ರಿಲೀಸ್ ಆಗೋಕೆ ರೆಡಿ : ರಿಷಬ್ ಶೆಟ್ಟಿ ಸಿನಿಮಾ

0

ರಿಷಬ್ ಶೆಟ್ಟಿ ಅವರು ‘ಕಾಂತಾರ  ಚಾಪ್ಟರ್ 1’ ಸಿನಿಮಾ ರಿಲೀಸ್ ನಂತರ ಸೂಪರ್ ಸ್ಟಾರ್ ಆಗಿ ಮೀಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಜನಪ್ರಿಯತೆ ಹಬ್ಬಿದೆ. ಅವರ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ ಜನರು ಬಹಳ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾರೆ. ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗುತ್ತಿದೆ. ಆದರೆ, ಈಗ ಅವರ ಚಿತ್ರವೊಂದು ಸೈಲೇಂಟ್‌ ಆಗಿ ರಿಲೀಸ್‌ ಆಗೋಕೆ ರೆಡಿ ಆಗಿದೆ ಎಂದು ಮಾಹಿತಿ ಹೊರ ಬಿದ್ದಿದೆ.

ರಿಷಬ್ ಶೆಟ್ಟಿ ಅವರ ಸಿನಿಮಾ ‘ಹರಿಕಥೆ ಅಲ್ಲ ಗಿರಿಕಥೆ’ 2022ರಲ್ಲಿ ತೆರೆಗೆ ಬಂದಿತ್ತು. ಜಿಯೋ ಹಾಟ್​​ಸ್ಟಾರ್​ ಅಲ್ಲಿ ವೀಕ್ಷಣೆಗೆ ಲಭ್ಯವಿದೆ. ಮತ್ತು ಇದು ‘ಕಾಂತಾರ’ ರಿಲೀಸ್​​ಗೂ ಮೊದಲೇ ತೆರೆಗೆ ಬಂದ ಸಿನಿಮಾ. ಈ ಸಿನಿಮಾ ಸಾಧಾರಣವಾಗಿ ಯಶಸ್ಸು ಕಂಡಿತ್ತು. ಆದರೆ ಈಗ ಈ ಸಿನಿಮಾ ತೆಲುಗಿಗೆ ಡಬ್ ಆಗಿ ರೆಡಿ ಆಗಿದೆ. ಇದೆ  ಮೇ 8 ರಂದು ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತೆರೆಗೆ ಬರಲು ಸಿದ್ದವಿದೆ ಎನ್ನಲಾಗಿದೆ. ಈ ನಿರ್ಧಾರವನ್ನು ಏಕೆ ಮಾಡಲಾಗಿದೆ ಎಂದು ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಈಗ ಈ  ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ರಿಷಬ್ ಶೆಟ್ಟಿ ಅವರು ಈಗ ಬರಿ ಕನ್ನಡದ ನಟ ಮಾತ್ರ ಅಲ್ಲ. ತೆಲುಗು ರಾಜ್ಯಗಳಲ್ಲಿ ಅವರ ಅನೇಕರಿಗೆ  ಪರಿಚಯ ಇದ್ದಾರೆ.  ಅಷ್ಟೇ ಅಲ್ಲದೆ ಅವರು ‘ಜೈ ಹನುಮಾನ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಕಾರಣದಿಂದ ‘ಎ ಫಿಲ್ಮ್ ಬೈ ಗಿರಿ’ ಸಿನಿಮಾ ಈಗ ರಿಲೀಸ್ ಮಾಡಿದರೆ ಜನ ನೋಡಬಹುದು ಎಂದು ನಂಬಿದಾರೆ ಎನ್ನ ಬಹುದು. ಕರಣ್ ಆನಂದ್ ಹಾಗೂ ಅನಿರುದ್ಧ ಮಹೇಶ್ ಅವರು ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಿರಿ ಕೃಷ್ಣ ಕಥೆ ಬರೆದಿದ್ದು, ರಿಷಬ್ ಶೆಟ್ಟಿ, ತಪಸ್ವಿನಿ ಪೂಣಚ್ಚ, ರಚನಾ ಇಂದರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡಿತ್ತು. ಈಗ ಎಂಜಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಚ್ಚಿಬಾಬು ಎಂಬುವವರು ಈ ಸಿನಿಮಾವನ್ನು ಡಬ್ ಮಾಡಿ ತೆಲುಗು ರಾಜ್ಯಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.