IPL 2026 SRH v/s MI : ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 244 ರನ್‌ಗಳ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ ಸುಲಭವಾಗಿ ಬೆನ್ನಟ್ಟಿದೆ. ಮುಂಬೈ ಪರ ಬ್ಯಾಟರ್‌ಗಳು ಸಾಂಘಿಕ ಪ್ರದರ್ಶನ ನೀಡಿ ದೊಡ್ಡ ಮೊತ್ತ ಕಲೆಹಾಕಿದರೂ, ಬೌಲಿಂಗ್ ವಿಭಾಗವು ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಸಂಪೂರ್ಣ ವಿಫಲವಾಯಿತು. 1.2 ಓವರ್ ಬಾಕಿ ಇರುವಂತೆಯೇ ಗುರಿ ತಲುಪಿದ ಹೈದರಾಬಾದ್, ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿತು.
ಸಾಮಾನ್ಯವಾಗಿ ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ದಿಕ್ಕು ಬದಲಿಸುವ ಆಟಗಾರ ಎಂದೇ ಅರ್ಥ. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಶಾರ್ದೂಲ್ ಠಾಕೂರ್ ಅವರನ್ನು ಬಳಸಿಕೊಂಡ ರೀತಿ ಅಚ್ಚರಿ ಮೂಡಿಸಿದೆ. ರಾಬಿನ್ ಮಿಂಜ್ ಬದಲಿಗೆ ಮೈದಾನ ಪ್ರವೇಶಿಸಿದ ಶಾರ್ದೂಲ್‌ಗೆ ನಾಯಕ ಹಾರ್ದಿಕ್ ಪಾಂಡ್ಯ ಒಂದೇ ಒಂದು ಓವರ್ ಬೌಲಿಂಗ್ ನೀಡಲಿಲ್ಲ. ಮೊದಲ ಇನಿಂಗ್ಸ್ ಮುಗಿದಿದ್ದರಿಂದ ಬ್ಯಾಟಿಂಗ್ ಮಾಡುವ ಅವಕಾಶವೂ ಇರಲಿಲ್ಲ. ಈ ಮೂಲಕ ಯಾವುದೇ ಅಂಕಿಅಂಶ ದಾಖಲಿಸದೆ ಪಂದ್ಯ ಪೂರೈಸಿದ ಅಪರೂಪದ ಆಟಗಾರ ಎನಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಯು ಐಪಿಎಲ್ ಇತಿಹಾಸದ ಅತ್ಯಂತ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. 243 ರನ್ ಗಳಿಸಿ ಸೋತ ಮುಂಬೈ ತಂಡದಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ವಿಲಕ್ಷಣ ದಾಖಲೆಗೆ ಪಾತ್ರರಾಗಿದ್ದಾರೆ. ಬೌಲಿಂಗ್ ಬಲಪಡಿಸಲು ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿದ ಶಾರ್ದೂಲ್ ಅವರಿಗೆ, ಇಡೀ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಒಂದೇ ಒಂದು ಓವರ್ ನೀಡಲಿಲ್ಲ! ಈ ಮೂಲಕ ಇಂಪ್ಯಾಕ್ಟ್ ಸಬ್ ಆಗಿ ಬಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡನ್ನೂ ಮಾಡದ ಮೊದಲ ಆಟಗಾರ ಎಂಬ ಹಣೆಪಟ್ಟಿ ಶಾರ್ದೂಲ್ ಪಾಲಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರನ್ ಮಳೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಮುಂಬೈ ಪರ ರಯಾನ್ ರಿಕೆಲ್ಟನ್ ಕೇವಲ ಬೌಂಡರಿ-ಸಿಕ್ಸರ್‌ಗಳ ಮೂಲಕವೇ ಅಬ್ಬರಿಸಿ ಅಜೇಯ 123 ರನ್‌ಗಳ ಸ್ಫೋಟಕ ಶತಕ ಸಿಡಿಸಿದರು. ಇವರ ಈ ದೈತ್ಯ ಬ್ಯಾಟಿಂಗ್ ನೆರವಿನಿಂದ ಮುಂಬೈ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಈ ಬೃಹತ್ ಗುರಿಯನ್ನು ಸಲೀಸಾಗಿ ಬೆನ್ನಟ್ಟಿದ ಹೈದರಾಬಾದ್, ಕೇವಲ 18.4 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಮುಂಬೈ ಅಭಿಮಾನಿಗಳಿಗೆ ಶಾಕ್ ನೀಡಿತು.














