ಮನೆ ಉದ್ಯೋಗ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಮೈಸೂರು ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Join Our Whatsapp Group

ಒಟ್ಟು 59 ಡಿ ಗ್ರೂಪ್ ನೌಕರರು, ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜುಲೈ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್’ಲೈನ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಯಾವ ಹುದ್ದೆ ಎಷ್ಟಿವೆ? ಇಲ್ಲಿ ನೋಡಿ.

ಡಿ ಗ್ರೂಪ್ ನೌಕರರು- 45

ಟೈಪಿಸ್ಟ್- 3

ಸ್ಟೆನೋಗ್ರಾಫರ್ ಗ್ರೇಡ್-III- 11

ವಿದ್ಯಾರ್ಹತೆ:

ಡಿ ಗ್ರೂಪ್ ನೌಕರರು- 10ನೇ ತರಗತಿ

ಟೈಪಿಸ್ಟ್- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೊಮಾ

ಸ್ಟೆನೋಗ್ರಾಫರ್ ಗ್ರೇಡ್-III: ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೊಮಾ

 ವೇತನ:

ಡಿ ಗ್ರೂಪ್ ನೌಕರರು- ಮಾಸಿಕ ₹ 17,000- 28,950

ಟೈಪಿಸ್ಟ್- ಮಾಸಿಕ ₹ 21,400-42,000

ಸ್ಟೆನೋಗ್ರಾಫರ್ ಗ್ರೇಡ್-III: ಮಾಸಿಕ ₹ 27,650-52,650

ವಯೋಮಿತಿ:

ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ 4, 2023 ಕ್ಕೆ ಕನಿಷ್ಠ 28 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ

ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ

ಅಂಗವಿಕಲರಿಗೆ/ವಿಧವಾ ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ:

ಡಿ ಗ್ರೂಪ್ ನೌಕರರು ಪೋಸ್ಟ್ ಗಳಿಗೆ SC/ST/ ಪ್ರವರ್ಗ-1 & ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ

ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 100 ರೂ.

ಸಾಮಾನ್ಯ ಅಭ್ಯರ್ಥಿಗಳು- 200 ರೂ.

ಟೈಪಿಸ್ಟ್ ಪೋಸ್ಟ್’ಗಳಿಗೆ

ಅಂಗವಿಕಲ ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ

ಪ್ರವರ್ಗ 2ಬಿ ಅಭ್ಯರ್ಥಿಗಳಿಗೆ- 150 ರೂ.

ಸಾಮಾನ್ಯ ಅಭ್ಯರ್ಥಿಗಳಿಗೆ – 300 ರೂ.

ಸ್ಟೆನೋಗ್ರಾಫರ್ ಪೋಸ್ಟ್ ಗಳಿಗೆ

SC/ST/ ಪ್ರವರ್ಗ-1 & ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ

ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 150 ರೂ.

ಸಾಮಾನ್ಯ ಅಭ್ಯರ್ಥಿಗಳಿಗೆ – 300 ರೂ.

ಪಾವತಿಸುವ ಬಗೆ- ಆನ್ಲೈನ್/ ಚಲನ್

ಆಯ್ಕೆ ಪ್ರಕ್ರಿಯೆ:

ಮೆರಿಟ್ ಲಿಸ್ಟ್

ಟೈಪಿಂಗ್ ಟೆಸ್ಟ್

ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/06/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 4, 2023

ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 8, 2023

ಹಿಂದಿನ ಲೇಖನಕೆಲಸದ ಬಗ್ಗೆ ಕೋಪ, ದ್ವೇಷದ ಪ್ರವೃತ್ತಿಗೆ ಕಾರಣವಾಗುತ್ತೆ ಈ ಗ್ರಹ..!
ಮುಂದಿನ ಲೇಖನಚುನಾವಣಾ ಸಿಬ್ಬಂದಿಯಿದ್ದ ಬಸ್ ಪಲ್ಟಿ: 12 ಮಂದಿಗೆ ಗಾಯ