ಬೆಂಗಳೂರು ಅಮ್ಮನ ಜೊತೆ ಬಟ್ಟೆ ಖರೀದಿಸಲು ಶಿವಾಜಿನಗರಕ್ಕೆ ಬಂದಿದ್ದ ಬಾಲಕ ದ್ವಿಚಕ್ರ ವಾಹನ ಪಾರ್ಕ್ ಮಾಡುವ ವೇಳೆ ವಿದ್ಯುತ್ ವೈರ್ ಬಿದ್ದು, ಶಾಕ್ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕಣ್ಣೇದುರೆ ಮಗನ ಸಾವು ಕಂಡು ತಾಯಿ ಕುಸಿದು ಬಿದ್ದು ಆಸ್ಪತ್ರೆ ಪಾಲಾಗಿದ್ದಾರೆ ಎಂದು ಹೇಳಲಾಗಿದೆ.
ಮಗ ಸಯ್ಯದ್ ಸುಫಿಯಾನ್ (17) ಸಾವೀಗೀಡಾದ ಬಾಲಕ. ತಾಯಿ ಉಮೇ ಸಲ್ಮಾ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಡುಗೊಂಡನಹಳ್ಳಿ ವೆಂಕಟಾಪುರದ ನಿವಾಸಿಯಾದ ಸಯ್ಯದ್ ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ದ್ವಿತೀಯ ಪಿಯುಸಿ ವ್ಯಾಸಂಗಕ್ಕಾಗಿ ಸನ್ನದ್ಧನಾಗಿದ್ದ ಎನ್ನಲಾಗಿದ್ದು. ಕಾಲೇಜಿಗೆ ಹೋಗಲು ಬಟ್ಟೆ ತರಲು ತಮ್ಮ ಆಕ್ಟಿವಾ ಹೊಂಡಾ ಗಾಡಿಯಲ್ಲಿ ಅಮ್ಮ ಹಾಗೂ ಸೋದರ ಸಂಬಂಧಿಯ ಜೊತೆಗೆ ಶಿವಾಜಿನಗರಕ್ಕೆ ಹೋಗಿದ್ದು ಬಟ್ಟೆ ಖರೀದಿಗಾಗಿ ಜನಜಂಗುಳಿ ಪ್ರದೇಶದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ಗೆ ಹೋಗಿದ್ದಾಗ ಈ ವೇಳೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿಯಿತು ಎನ್ನಲಾಗಿದೆ .
ಈ ವೇಳೆ ವಿದ್ಯುತ್ ಕಂಬಕ್ಕೆ ತಾಗಿಕೊಂಡಿದ್ದ ವೈರ್ ನೇರವಾಗಿ ಸೈಯದ್ಗೆ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಶಾಕ್ ಹೋಡೆದು ಕ್ಷರ್ಣಾಧದಲ್ಲಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ತಕ್ಷಣ ಅಲ್ಲಿನ ಸ್ಥಳೀಯರ ಸಹಾಯದಿಂದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯೂವ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಕೇಳಿದ ತಾಯಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ತಿಳಿದುಬಂದಿದೆ ಎನ್ನಬಹುದು .
ಮೃತ ಸಯ್ಯದ್ ತಂದೆ ಶಫಿವುಲ್ಲಾ ಅವರು ಆಟೋ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತು ತಾಯಿ ಉಮೇ ಸಲ್ಮಾ ಗೃಹಿಣಿಯಾಗಿದ್ದಾರೆ. ಅವರಿಗೆ ಆರು ವರ್ಷದ ಪುತ್ರಿಯೂ ಇದ್ದಾಳೆ. ಪೋಷಕರಿಗೆ ಸಯ್ಯದ್ನನ್ನು ಚೆನ್ನಾಗಿ ಓದಿಸಿ ಇಂಜಿನಿಯರಿಂಗ್ ಓದಿಸುವ ಆಸೆ ಇತ್ತು. ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿಯುವ ಕೆಲ ಕ್ಷಣಗಳ ಹಿಂದೆ ಈ ದುರಂತ ಸಂಭವಿಸಿದೆ. ಸುಮಾರು 50 ಮೀಟರ್ ಅಂತರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಯಲಾಗಿದೆ.














