ಮನೆ ಸುದ್ದಿ ಜಾಲ ಡೊನಾಲ್ಡ್​ ಟ್ರಂಪ್​ : ಅಣ್ವಸ್ತ್ರ ಹೊಂದಲು ಅವಕಾಶ ಕೊಡುವುದಿಲ್ಲ

ಡೊನಾಲ್ಡ್​ ಟ್ರಂಪ್​ : ಅಣ್ವಸ್ತ್ರ ಹೊಂದಲು ಅವಕಾಶ ಕೊಡುವುದಿಲ್ಲ

0

ಟೆಹ್ರಾನ್ ಇರಾನ್​ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವಲ್ಲಿ ಯಶಸ್ವಿಯಾದರೆ, ಇಸ್ರೇಲ್ ಸೇರಿದಂತೆ ಗಲ್ಫ್ ಪ್ರದೇಶದ ಮೇಲೆ ಅದನ್ನು ಪ್ರಯೋಗಿಸುವ ಸಾಧ್ಯತೆ ಇರುವುದರಿಂದ, ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ  ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎನ್ನಲಾಗಿದೆ.

ಇರಾನ್​ನಲ್ಲಿ ಪರಮಾಣು ಶಸ್ತ್ರಾಸ್ತ್ರವಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ಅವರನ್ನು ನಾವು ಬಿ2 ಬಾಂಬರ್​ಗಳೆಂದು ಪರಿಗಣಿಸುತ್ತೇವೆ. ನಾವು ಹಾಗೆ ಮಾಡದಿದ್ದರೆ ಈಗಾಗಲೇ ಅವರ ಬಳಿ ಪರಮಾಣು ಶಸ್ತ್ರಾಸ್ತ್ರ ಇರುತ್ತಿತ್ತು. ಪರಿಣಾಮ ಇಸ್ರೇಲ್​, ಮಧ್ಯಪ್ರಾಚ್ಯ ಮತ್ತು ಯುರೋಪ್​ ಇಬ್ಭಾಗವಾಗುತ್ತಿತ್ತು ಎಂದು ಟ್ರಂಪ್​ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇರಾನ್​ ಮಿಲಿಟರಿ ಸಾಮರ್ಥ್ಯವನ್ನು  ಗಮನಾರ್ಹವಾಗಿ ಕುಸಿದಿದೆ. ಅಲ್ಲಿನ​ ನಾಯಕತ್ವವು ದುರ್ಬಲಗೊಂಡಿದೆ. ಇರಾನ್​ ನಾಶವಾಗುತ್ತಿದ್ದು ಆದರೆ ಅವರ ಬಳಿ ನೌಕಾಪಡೆ ಇಲ್ಲ. ವಾಯುಪಡೆಗಳು, ವಿಮಾನ ವಿರೋಧಿ ಉಪಕರಣಗಳಿಲ್ಲ. ಅಲ್ಲದೆ, ರಾಡಾರ್ ಆಗಲಿ, ನಾಯಕರಾಗಲಿ ಇಲ್ಲ​ ಎಂದಿದ್ದಾರೆ ಎಂಬ ಮಾಹಿತಿ ಬಂದಿದೆ..

 ಇರಾನ್ ಜೊತೆಗಿನ ಮಾತುಕತೆಗಳು ತಾವು ಅಂದುಕೊಂಡಂತೆ ನಡೆಯುವುದಿಲ್ಲ ಎಂದಿದ್ದಾರೆ. ನಮಗೆ ಬೇಕಾದ ರೀತಿಯಲ್ಲಿ ಅವರು ಒಪ್ಪಂದಕ್ಕೆ ಬರುತ್ತಿಲ್ಲ. ಈ ವಿಷಯವನ್ನು ನಾವು ಸರಿ ಮಾಡಲಿದ್ದೇವೆ. ಅಮೆರಿಕವು ಸಂಘರ್ಷವನ್ನು ಅಕಾಲಿಕವಾಗಿ ಕೊನೆಗೊಳಿಸುವುದಿಲ್ಲ. ಇನ್ನೂ ಮೂರು ವರ್ಷ ಈ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ಟ್ರಂಪ್​ ತಿಳಿಸಿದ್ದಾರೆ. ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನದ ಭಾಗವಾಗಿ 45 ವಾಣಿಜ್ಯ ಹಡಗುಗಳನ್ನು ಹಿಂತಿರುಗಿಸಲು ಅಮೆರಿಕ ಸೆಂಟ್ರಲ್​ ಕಮಾಂಡ್​ ಸೂಚನೆ ನೀಡಿದೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಸೆಂಟ್ರಲ್​ ಕಮಾಂಡ್, ಯುಎಸ್ ಪಡೆಗಳು ಅಂತಾರಾಷ್ಟ್ರೀಯ ನೀರಿನಲ್ಲಿ ಗಸ್ತು ತಿರುಗುವುದನ್ನು ಮುಂದುವರೆಸಿವೆ ಎಂದು ತಿಳಿಸಿದೆ.

ಹೀಗೆ ಉದ್ವಿಗ್ನತೆ ಮುಂದುವರೆದಂತೆ, ಇರಾನ್‌ಗೆ ಸಂಬಂಧಿಸಿದ ಸಾಗಣೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಈ ಜಲ ದಿಗ್ಬಂಧನ ಹೇರಲಾಗಿದೆ. ಇರಾನಿನ ವ್ಯಾಪಾರ ಮಾರ್ಗಗಳಿಗೆ ಸಂಬಂಧಿಸಿದ ಕಡಲಿನ ಚಟುವಟಿಕೆಯನ್ನು ಮಿತಿಗೊಳಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೆಂಟ್ರಲ್​ ಕಮಾಂಡ್ ಹೇಳಿದೆ. ಇನ್ನೊಂದೆಡೆ, ಇರಾನ್​ ಆರ್ಥಿಕತೆಯನ್ನು ಗುರಿಯಾಗಿಸಿ ಅಮೆರಿಕವು ಅಲ್ಲಿ​ನ ಮೂರು ವಿದೇಶಿ ಕರೆನ್ಸಿ ವಿನಿಮಯ ಸಂಸ್ಥೆಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದೆ ಎನ್ನಲಾಗಿದೆ. ಇದರಿಂದ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧ ಮತ್ತು ಹಲವು ನಿರ್ಬಂಧಗಳು ತಮ್ಮ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಆರ್ಥಿಕ ಹೋರಾಟ ನಡೆಸುವ ಮೂಲಕ ಶತ್ರುಗಳಿಗೆ ತಕ್ಕ ಉತ್ತರ ನೀಡಲು ದೇಶೀಯವಾಗಿ ತಯಾರಿಸಿದ ಸರಕುಗಳ ಬಳಕೆಗೆ ಆದ್ಯತೆ ನೀಡುವಂತೆ ದೇಶದ ಜನರಿಗೆ ಇರಾನ್​ ಸರ್ವೋಚ್ಛ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಕರೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ ಎನ್ನಲಾಗಿದೆ.