ರಾಜ್ಯದ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದುವುದು ಕಡ್ಡಾಯ ಮಾಡಬೇಕೆಂಬ ವಿಚಾರ ಇದೀಗ ಗಮನ ಸೆಳೆಯುತ್ತಿದೆ. ನಾಗಸಿಂಹ (ಮಕ್ಕಳ ಹಕ್ಕುಗಳ ಕಾರ್ಯಕರ್ತ) ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ನಿರ್ಧಾರವನ್ನು ಸ್ವಾಗತಿಸುವ ಜೊತೆಗೆ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಪ್ರತಿದಿನ 15 ನಿಮಿಷಗಳ ಕಾಲ ಆದರೂ ವಿದ್ಯಾರ್ಥಿಗಳು ಪ್ರತಿದಿನ ದಿನಪತ್ರಿಕೆ ಓದ ಬೇಕು ಎಂದು ಮಾಡುವ ಸರ್ಕಾರದ ನಿರ್ಧಾರವು ಅತ್ಯಂತ ಶ್ಲಾಘನೀಯ. ಇದು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವುದಲ್ಲದೆ, ಅವರ ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದಕ್ಕೂ ಹಾಗೂ ಭಾಷಾ ಪ್ರಾವೀಣ್ಯವನ್ನು ಹೆಚ್ಚಿಸುವುದಕ್ಕೂ ಇದು ಬಹಳ ಸಹಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು ಕೆಲವು ಮೂಲಭೂತ ಬದಲಾವಣೆಗಳು ಅಗತ್ಯವಿದೆ ಎಂದು ನಾಗಸಿಂಹ ಅಭಿಪ್ರಾಯಪಟ್ಟಿದ್ದಾರೆ ಎನ್ನಬಹುದು.
ಪ್ರಸ್ತುತ ಅನೇಕ ಶಾಲೆಗಳಲ್ಲಿ ಕೇವಲ ಒಂದು ಅಥವಾ ಎರಡು ದಿನಪತ್ರಿಕೆಗಳಷ್ಟೇ ಲಭ್ಯವಿರುವುದರಿಂದ, ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಮಾಹಿತಿಯನ್ನು ಅರಿಯುವ ಅವಕಾಶ ಸೀಮಿತವಾಗುತ್ತಿದೆ. ಹೀಗಾಗಿ, ಪ್ರತಿಯೊಂದು ಶಾಲೆಯಲ್ಲೂ ಕನಿಷ್ಠ 15 ರಿಂದ 90 ವಿವಿಧ ದಿನಪತ್ರಿಕೆಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಇಷ್ಟವಾದ ದಿನಪತ್ರಿಕೆಗಳನ್ನು ಆಯ್ಕೆಮಾಡಿ ಓದುವ ಅವಕಾಶ ಕಲ್ಪಿಸ ಬೇಕು . ದಿನಪತ್ರಿಕೆ ಓದಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸುವುದು ಅಗತ್ಯವಾಗಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಸುದ್ದಿ ಓದುವ ಪದ್ಧತಿಗೆ ಸೀಮಿತವಾಗದೆ, ಎಲ್ಲಾ ವಿದ್ಯಾರ್ಥಿಗಳೂ ಸಕ್ರಿಯವಾಗಿ ಭಾಗವಹಿಸುವಂತಾಗ ಬೇಕು ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ..
ಶಾಲಾ ವಿದ್ಯಾರ್ಥಿಗಳು ಓದಿದ ಸುದ್ದಿಗಳ ಕುರಿತು ಚರ್ಚೆ ನಡೆಸಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ ಎನ್ನಬಹುದು. ಹಾಗೆಯೇ, ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಸರಿಯಾಗಿ ಸಂಗ್ರಹಿಸಲು ಮತ್ತು ಅವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ ಎನ್ನಬಹುದು.
ಶಾಲೆಯ ರಜಾದಿನಗಳಲ್ಲಿ ಬಂದಿರುವ ದಿನಪತ್ರಿಕೆಗಳನ್ನು ಮಾರನೇ ದಿನ ವಿದ್ಯಾರ್ಥಿಗಳು ಓದಬೇಕು ಎಂಬ ಅವಕಾಶ ನೀಡಬೇಕು ಆಗ ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಹೆಚ್ಚಾದಂತೆ, ಮಾಧ್ಯಮಗಳು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ, ಶಿಕ್ಷಣ ಇಲಾಖೆ ಪ್ರತೀ ತಿಂಗಳು ಕನಿಷ್ಠ ಒಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ ಈ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಬೇಕು .
ವಿದ್ಯಾರ್ಥಿಗಳು ದಿನಪತ್ರಿಕೆಗಳ “ವಾಚಕರ ವಾಣಿ” ವಿಭಾಗಕ್ಕೆ ಪತ್ರಗಳನ್ನು ಬರೆಯುವಂತೆ ಶಿಕ್ಷಕರು ಉತ್ತೇಜಿಸುವುದು, ಅವರ ಬರವಣಿಗೆ ಕೌಶಲ್ಯವನ್ನು ಮತ್ತಷ್ಟು ಬೆಳೆಸಲು ಸಹಾಯಕವಾಗುತ್ತದೆ ಎಂದು ಪತ್ರದಲ್ಲಿ ಅವರು ಬರೆಯಲಾಗಿದೆ ಎಂದು ತಿಳಿದುಬಂದಿದೆ.














