ತಿರುಪತಿಯ ಶ್ರೀವಾರಿ ದರ್ಶನಕ್ಕೆ ದಕ್ಷಿಣ ಕರ್ನಾಟಕದ ಐದು ಜಿಲ್ಲೆಗಳಿಂದ ಹೋಗಲು ಬಯಸುವ ಭಕ್ತರಿಗೆ ವಿಶೇಷ ರೈಲು ಪ್ರತಿದಿನ ಹೊಗುತ್ತದೆ ಎನ್ನಲಾಗಿದೆ. ದಕ್ಷಿಣ ಕರ್ನಾಟಕದ ಪ್ರಮುಖ ಐದು ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸುತ್ತೆ ಮತ್ತು ರಾಜ್ಯ ಪ್ರಮುಖ 20 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಚಾಮರಾಜನಗರದಿಂದ ಪ್ರಯಾಣ ಆರಂಭಿಸುವ ಈ ರೈಲು ಸುಮಾರು 12 ಗಂಟೆಯಲ್ಲಿ ತಿರುಪತಿ ನಿಲ್ದಾಣ ತಲುಪಲಿದೆ ಎನ್ನಲಾಗಿದೆ. ಈ ನಡುವೆ ರಾಜ್ಯದ ಕೆಲವು ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸುತ್ತದೆ. ವಾರದ ಎಲ್ಲಾ ದಿನಗಳಂದು ಈ ರೈಲು ಸಂಚರಿಸುತ್ತದೆ ಎನ್ನಬಹುದು.
ಈ ಕುರಿತ್ತಾಗಿ ಚಾಮರಾಜನಗರದಿಂದ ಮಧ್ಯಾಹ್ನ 3.50ಕ್ಕೆ ಪ್ರಯಾಣ ಆರಂಭಿಸಿ, ಮಾರನೆ ದಿನ ಬೆಳಗಿನ ಜಾವ 4 ಗಂಟೆ 5 ನಿಮಿಷಕ್ಕೆ ತಲುಪಲಿದ್ದು. ಈ ರೈಲು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. 5 ಜಿಲ್ಲೆಯ ಬಾಲಾಜಿಯ ಭಕ್ತರು ನೇರವಾಗಿ ಈ ರೈಲಿನ ಮೂಲಕ ತಿರುಪತಿಗೆ ತೆರಳಬಹುದಾಗಿದೆ. ರಾತ್ರಿ 8 ಗಂಟೆ 10 ನಿಮಿಷಕ್ಕೆ KSR ಬೆಂಗಳೂರಿನಲ್ಲಿರಲಿದೆ ಎನ್ನಬಹುದು.
ನಂತರ ಚಾಮರಾಜನಗರ, ನಂಜನಗೂಡು, ಅಶೋಕಪುರಂ, ಚಾಮರಾಜಪುರಂ, ಮೈಸೂರು, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ನಾಯಂಡಹಳ್ಳಿ, ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೆಆರ್ ಪುರಂ, ವೈಟ್‌ಫೀಲ್ಡ್, ಮಾಲೂರು, ತಯ್ಯಕಲ್, ಬಂಗಾರಪೇಟೆ, ಕಾಮಸಮುದ್ರಂ ಈ ಸ್ಥಳಗಳಲ್ಲಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಕೊಡುವುದು ಎನ್ನಲಾಗಿದೆ.
ಹಾಗೆಯೆ ಪ್ರತಿದಿನ ತಿರುಪತಿ ನಿಲ್ದಾಣದಿಂದ ರಾತ್ರಿ 9.40ಕ್ಕೆ ರೈಲು ತನ್ನ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 9.20ಕ್ಕೆ ಅಂತಿಮ ನಿಲ್ದಾಣವನ್ನು ಚಾಮರಾಜನಗರವನ್ನು ತಲುಪುತ್ತದೆ. KSR ಬೆಂಗಳೂರಿನಲ್ಲಿ ಬೆಳಗಿನ ಜಾವ 4.25ಕ್ಕೆ ಇರಲಿದೆ ಎನ್ನಲಾಗಿದೆ.














