ಮನೆ ರಾಜ್ಯ ನಟ ವಿಜಯ್‌ರನ್ನ ನಟನಾಗಿ ನೋಡಿದ್ರು, ಇನ್ನು ಮುಂದೆ ಸಿಎಂ ಆಗಿ ನೋಡ್ತಾರೆ – ಡಿವಿಎಸ್

ನಟ ವಿಜಯ್‌ರನ್ನ ನಟನಾಗಿ ನೋಡಿದ್ರು, ಇನ್ನು ಮುಂದೆ ಸಿಎಂ ಆಗಿ ನೋಡ್ತಾರೆ – ಡಿವಿಎಸ್

0

ಬೆಂಗಳೂರು : ತಮಿಳುನಾಡಿನಲ್ಲಿ ನಟ ವಿಜಯ್‌ ಉತ್ತಮ ನಾಯಕನಾಗಿ ಹೊರ ಬಂದಿದ್ದಾರೆ. ಅಲ್ಲಿನ ಜನ ವಿಜಯ್ ಅವರನ್ನು ಜನಪ್ರಿಯ ನಟನಾಗಿ ನೋಡಿದ್ದರು. ಮುಂದೆ ಸಿಎಂ ಆಗಿ ನೋಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಎಂಕೆ ಮತ್ತು ಅಣ್ಣ ಡಿಎಂಕೆ ಎರಡು ಪಕ್ಷವನ್ನ ಜನ ಬಿಟ್ಟು ವಿಜಯ್ ಅವರ ಟಿವಿಕೆ ಪರ ಮತ ಹಾಕಿದ್ದಾರೆ. ಅವರು ನಟನಾಗಿದ್ದಾಗ ಜನರ ಸೇವೆ ಮಾಡಿದ್ದಾರೆ. ಅವರಿಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ. ವಿಜಯ್ ಅವರಿಗೆ ಅಭಿನಂದನೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಮಮತ ಬ್ಯಾನರ್ಜಿ ಅವರ ವಿರುದ್ಧದ ಅಲೆ ಶುರುವಾಗಿದೆ. ಅವರು ಆಡಳಿತಕ್ಕೆ ಬಂದಮೇಲೆ ಮಾಡಿರೋ ದುರಾಡಳಿತದ ಪ್ರಭಾವ ಇದು. ಕಮ್ಯುನಿಷ್ಟ್ ಮಾದರಿಯ ಆಳ್ವಿಕೆ, ಕಾಂಗ್ರೆಸ್ ನಿರ್ಮಾಣ ಮಾಡುತ್ತೇವೆ ಎಂದು ಪಣತೊಟ್ಟಿದ್ದರು. ನಮ್ಮ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ನಿರಂತರ ಪರಿಶ್ರಮದ ಫಲ ಇದು. ನಾನು ಪಶ್ಚಿಮ ಬಂಗಾಳದ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.